ಜಗತ್ತಿನ ಮೂರನೇ ಆರ್ಥಿಕತೆಯಾಗಲಿದೆ ಭಾರತ : ʼಜೊತೆಯಾಗಿ ಕೆಲಸ ಮಾಡೋಣʼ ಎಂದ ಇಂಗ್ಲೆಂಡ್‌

  • ಭಾರತದೊಂದಿಗೆ ಕೆಲಸ ಮಾಡಲು ಇದು ಸಕಾಲ
  • ಭಾರತ-ಇಂಗ್ಲೆಂಡ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ

ಈ ದಶಕದ ಅಂತ್ಯದ ವೇಳೆಗೆ ಭಾರತ ಇಂಗ್ಲೆಂಡ್‌ ಅನ್ನು ಹಿಂದಕ್ಕೆ ತಳ್ಳಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಲಿದೆ, ಹೀಗಾಗಿ, ದೆಹಲಿ ಮತ್ತು ಲಂಡನ್‌ ಜತೆಯಾಗಿ ಕೆಲಸ ಮಾಡಬೇಕು ಎಂದು ಭಾರತದಲ್ಲಿರುವ ಬ್ರಿಟನ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹೇಳಿದ್ದಾರೆ.

"ಉಭಯ ದೇಶಗಳ ಆರ್ಥಿಕತೆಗಳು ಒಂದೇ ವೇಗದಲ್ಲಿ ಸಾಗುತ್ತಿದ್ದು, ಭಾರತ ಇಂಗ್ಲೆಂಡ್‌ ಮತ್ತು ಇತರೆ ದೇಶಗಳನ್ನು ಹಿಂದಿಕ್ಕಿ ವಿಶ್ವದ ಮೂರನೇ ಬೃಹತ್‌ ಆರ್ಥಿಕತೆಯತ್ತ ಸಾಗಲು ದಾಪುಗಾಲಿಡುತ್ತಿದೆ. ಹೀಗಾಗಿ, ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದೆʼʼ ಎಂದು  ನಿನ್ನೆ ನಡೆದ ಭಾರತದ-ಬ್ರಿಟನ್‌ ವ್ಯಾಪಾರ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ ಐರೋಪ್ಯ ಒಕ್ಕೂಟವನ್ನು ತೊರೆದಿರುವುದರಿಂದ, ಭಾರತದೊಂದಿಗೆ ಕೆಲಸ ಮಾಡಲು ಇದು ಸಕಾಲʼ ಎಂದು ಅಭಿಪ್ರಾಯಪಟ್ಟಿದ್ದಾರೆ. "ಈ ವರ್ಷದ ದೀಪಾವಳಿ ವೇಳೆಗೆ ಲಂಡನ್‌ ಮತ್ತು ನವದೆಹಲಿಯು ಮುಕ್ತ ಮಾರಾಟ ಒಪ್ಪಂದ (ಎಫ್‌ಟಿಎ) ಪೂರ್ಣಗೊಳಿಸಲು ಪ್ರಯತ್ನಿಸುತ್ತಿವೆ. ಎಫ್‌ಟಿಎಯುಯಿಂದಾಗಿ ಭಾರತದಲ್ಲಿ ಉದ್ಯೋಗ ಹೆಚ್ಚಿಸಲು ಮತ್ತು ಆರ್ಥಿಕ ಪ್ರಗತಿಗೆ ನೆರವಾಗಲಿದೆʼʼ ಎಂದು  ಅಲೆಕ್ಸ್‌ ಎಲ್ಲಿಸ್‌ ಹೇಳಿದ್ದಾರೆ.

"ಭಾರತ ಮತ್ತು ಇಂಗ್ಲೆಂಡ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕ್ಕೆ ಸಂಬಂಧಪಟದ್ಟಂತೆ ಐದನೇ ಸುತ್ತಿನ ಮಾತುಕತೆಗಳು ಕಳೆದ ತಿಂಗಳು ಪೂರ್ಣಗೊಂಡಿದೆʼʼ ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಅಂದೋಲನ | ಕೂದಲು ಕತ್ತರಿಸಿಕೊಂಡ ಮಹಿಳೆಗೆ ಹಾರ್ನ್‌ ಬೆಂಬಲ ಸೂಚಿಸಿದ ನಾಗರಿಕರು

"ಭಾರತದಲ್ಲಿ ಸುಮಾರು 618 ಇಂಗ್ಲೆಂಡ್‌ ಕಂಪನಿಗಳಿದ್ದು, 4 ಲಕ್ಷಕ್ಕೂ ಅಧಿಕ ನಾಗರಿಕರಿಗೆ ಉದ್ಯೋಗ ನೀಡಿದೆ. ಹಲವು ಶತಕೋಟಿ ಡಾಲರ್‌ ಆದಾಯವನ್ನು ಭಾರತ ಗಳಿಸುತ್ತಿದೆ ಎಂದು 2022ರ ಬ್ರಿಟನ್ಸ್‌ ಮೀಟ್ಸ್‌ ಇಂಡಿಯಾ (ಬಿಎಂಐ) ವರದಿ ತಿಳಿಸಿದೆ.

ಮುಕ್ತ ವ್ಯಾಪಾರ ಎಂದರೇನು?

  • ದೇಶಗಳ ನಡುವೆ ನಡೆಯುವ ವ್ಯಾಪಾರ ವಹಿವಾಟುಗಳ ಮೇಲೆ ಯಾವುದೇ ನೀತಿ ಮತ್ತು ನಿರ್ಬಂಧಗಳಿಲ್ಲದಿರುವುದು ಮುಕ್ತ ವ್ಯಾಪಾರ ನೀತಿ ಎನ್ನಲಾಗುತ್ತದೆ.
  •  ಈ ವ್ಯಾಪಾರ ನೀತಿಯಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸರಕುಗಳು ಯಾವುದೇ ಅಡತಡೆಗಳಿಲ್ಲದೇ ವರ್ಗಾವಣೆ ಮಾಡಲ್ಪಡುವ ಪ್ರಕಿಯೆಯಾಗಿದೆ.
ನಿಮಗೆ ಏನು ಅನ್ನಿಸ್ತು?
1 ವೋಟ್