ವಿಶ್ವಸಂಸ್ಥೆಯಲ್ಲಿ ಶಿಕ್ಷಣದ ಮಹತ್ವ ಹೇಳಿದ ಹೊಲೋಗ್ರಾಮ್‌ ಗಾಂಧಿ

ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿಯ ಹೊಲೋಗ್ರಾಮ್‌ ಪ್ರದರ್ಶಿಸಲಾಗಿದೆ. ಶಿಕ್ಷಣವು ಸಮಾನತೆ, ನೈತಿಕತೆ ಒದಗಿಸಬೇಕು. ವ್ಯಕ್ತಿಯ ಅಭಿವೃದ್ಧಿಯಾದರೆ ಸಮಾಜ ಅಭಿವೃದ್ಧಿಯಾಗಲಿದೆ ಎಂದು ಗಾಂಧಿ ಹೊಲೋಗ್ರಾಮ್ ಹೇಳಿದೆ.

ಅಕ್ಟೋಬರ್ 2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗುವ ಅಂತಾರಾಷ್ಟ್ರೀಯ ಅಂಹಿಸಾ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ. ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿಯ ಹೊಲೋಗ್ರಾಮ್‌ ಪ್ರದರ್ಶಿಸಲಾಗಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ ಮತ್ತು ಯುನೆಸ್ಕೋದ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆಯ (ಎಮ್‌ಜಿಐಇಪಿ) ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆಯ ನಿಮಿತ್ತ ಆಯೋಜಿಸಲಾದ ಪ್ಯಾನಲ್ ಚರ್ಚೆಯ ಸಮಯದಲ್ಲಿ ಮಹಾತ್ಮಾ ಗಾಂಧಿ ಅವರ ಜೀವಂತವಾಗಿ ಮಾತನಾಡುವಂತಹ ಹೊಲೋಗ್ರಾಮ್‌ ಪ್ರದರ್ಶಿಸಲಾಗಿದೆ.

Eedina App

"ಮಾನವನ ಏಳಿಗೆಗಾಗಿ ಶಿಕ್ಷಣ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಚರ್ಚೆಯಲ್ಲಿ ಮಹಾತ್ಮಾ ಗಾಂಧಿ ಹೊಲೊಗ್ರಾಮ್‌ ಮಾತನಾಡಿದೆ. ಗಾಂಧಿಯ ಹೊಲೊಗ್ರಾಮ್‌ಗೆ ಧ್ವನಿಯನ್ನು ಅಳವಡಿಸಿ, ಶಿಕ್ಷಣದ ಬಗ್ಗೆ ಗಾಂಧಿ ಅವರ ಚಿಂತನೆಗಳನ್ನು ಹಂಚಿಕೊಳ್ಳಲಾಗಿದೆ.

ಸಾಕ್ಷರತೆ ಶಿಕ್ಷಣದ ಆರಂಭ ಅಥವಾ ಅಂತ್ಯ ಅಲ್ಲ. ಶಿಕ್ಷಣವೆಂದರೆ ದೇಹ, ಮನಸ್ಸು ಮತ್ತು ಚೈತನ್ಯ, ವ್ಯಕ್ತಿತ್ವ ಸೇರಿದಂತೆ ಒಂದು ಮಗುವಿನಲ್ಲಿರುವ ಅತ್ಯುತ್ತಮವಾದ ಎಲ್ಲವನ್ನೂ ಹೊರತರುವುದಾಗಿದೆ. ಆಧ್ಯಾತ್ಮಿಕ ತರಬೇತಿ ಎಂದರೆ ಹೃದಯದ ಶಿಕ್ಷಣ ಎಂದು ಗಾಂಧಿ ಈ ಕಾರ್ಯಕ್ರಮದಲ್ಲಿ ಶಿಕ್ಷಣದ ಕುರಿತ ತಮ್ಮ ಸಂದೇಶ, ದೃಷ್ಟಿಕೋನಗಳನ್ನು ಹಂಚಿಕೊಂಡರು.

AV Eye Hospital ad

"ಸಾಕ್ಷರತೆಯು ಶಿಕ್ಷಣದ ಅಂತ್ಯವಲ್ಲ ಅಥವಾ ಪ್ರಾರಂಭವೂ ಅಲ್ಲ. ನನ್ನ ಪ್ರಕಾರ ಶಿಕ್ಷಣದ ಮೂಲಕ ಮಗು ಮತ್ತು ಮನುಷ್ಯ, ದೇಹ, ಮನಸ್ಸು ಹಾಗೂ ಆತ್ಮದಲ್ಲಿನ ಅತ್ಯುತ್ತಮವಾದ ಎಲ್ಲವನ್ನೂ ಹೊರತೆಗೆಯುವುದು. ಆಧ್ಯಾತ್ಮಿಕ ತರಬೇತಿ ಎಂದರೆ ಹೃದಯದ ಶಿಕ್ಷಣ ಎಂದು ನಾನು ಅರ್ಥೈಸುತ್ತೇನೆ" ಎಂದು ಗಾಂಧಿ ಹೊಲೋಗ್ರಾಮ್ ಹೇಳಿದೆ.

ಪ್ಯಾನೆಲ್ ಚರ್ಚೆಯಲ್ಲಿ ಗಾಂಧಿ ಹೊಲೋಗ್ರಾಮ್ ಮೂರು ಬಾರಿ ಕಾಣಿಸಿಕೊಂಡಿದೆ. “ನಾವು ಸ್ಟಾಕ್ ಮಾರುಕಟ್ಟೆಯಲ್ಲಿ ಭೂಮಿ ಅಥವಾ ಷೇರುಗಳ ಮೌಲ್ಯವನ್ನು ನಿರ್ಣಯಿಸುವ ರೀತಿಯಲ್ಲಿಯೇ ಶಿಕ್ಷಣದ ಮೌಲ್ಯವನ್ನು ನಿರ್ಣಯಿಸುತ್ತೇವೆ. ವಿದ್ಯಾರ್ಥಿಯು ಹೆಚ್ಚು ಹಣ ಗಳಿಸಲು ಸಾಧ್ಯವಾಗುವಂತಹ ಶಿಕ್ಷಣವನ್ನು ಮಾತ್ರ ನೀಡಲು ನಾವು ಬಯಸುತ್ತೇವೆ. ಶಿಕ್ಷಿತರ ಚಾರಿತ್ರ್ಯದ ಸುಧಾರಣೆಯ ಬಗ್ಗೆ ನಾವು ಯಾವುದೇ ಚಿಂತನೆ ಮಾಡುವುದಿಲ್ಲ. ಶಾಲೆಗಳು ಮತ್ತು ಕಾಲೇಜುಗಳು ನಿಜವಾಗಿಯೂ ಸರ್ಕಾರಕ್ಕೆ ಗುಮಾಸ್ತರನ್ನು ತಿರುಗಿಸುವ ಕಾರ್ಖಾನೆಯಾಗಿದೆ. ಇದಕ್ಕೆ ವಿರುದ್ಧವಾಗಿ, ನಿಜವಾದ ಶಿಕ್ಷಣವು ನಿಮ್ಮಿಂದ ಉತ್ತಮವಾದದ್ದನ್ನು ಸೆಳೆಯುವಲ್ಲಿ ಒಳಗೊಂಡಿದೆ. ಇದಕ್ಕಿಂತ ಉತ್ತಮವಾದ ಪುಸ್ತಕ ಯಾವುದು? ಮಾನವೀಯತೆಯ ಪುಸ್ತಕಕ್ಕಿಂತ ಹೆಚ್ಚಿನದು ಏನಾದರೂ ಇದೆಯೆ" ಎಂದು ಗಾಂಧಿ ಹೊಲೋಗ್ರಾಮ್ ಪ್ರಶ್ನಿಸಿದೆ.

"ಶಿಕ್ಷಣವು ಸಮಾನತೆ, ನೈತಿಕತೆ ಒದಗಿಸಬೇಕು. ವ್ಯಕ್ತಿಯ ಅಭಿವೃದ್ಧಿಯಾದರೆ ಸಮಾಜ ಅಭಿವೃದ್ಧಿಯಾದಂತೆ. ಸಮಗ್ರ ಅಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಗೆ ಉನ್ನತ ಮತ್ತು ಘನತೆ ಒದಗಿಸಲು ಬಹಳ ನಿರ್ಣಾಯಕ. ಶಾಲೆಗಳು ಮತ್ತು ಕಾಲೇಜುಗಳ ಶಿಕ್ಷಣದಲ್ಲಿ ನಮ್ಮ ಮಕ್ಕಳಿಗೆ ಸವಾಲುಗಳನ್ನು ಹೇಗೆ ಎದುರಿಸಬೇಕು, ಉತ್ತಮವಾದ ಜೀವನವನ್ನು ನಿರ್ಮಿಸಿಕೊಳ್ಳುವ ಮೂಲಕ ಸುಂದರ ಸಮಾಜ ಹೇಗೆ ನಿರ್ಮಿಸಿವುದು ಎಂಬ ಕುರಿತು ನಮ್ಮ ಶಾಲೆಗಳು ಕಲಿಸಬೇಕು" ಎಂದು ಹೊಲೋಗ್ರಾಮ್‌ ತಿಳಿಸಿದೆ.

ಜೀವನವು ಎಂದಿಗೂ ಉತ್ತಮ ಕ್ಷಣಗಳಿಂದ ಕೂಡಿರುವುದಿಲ್ಲ. ನೀವು ಏರಿಳಿತಗಳನ್ನು ಎದುರಿಸಲು ಕಲಿಯಬೇಕು. ಯಶಸ್ಸನ್ನು   ತೆಗೆದುಕೊಳ್ಳುವಂತೆಯೇ ಹಿನ್ನಡೆಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಈ ರೀತಿಯ ಉತ್ತಮ ಶಿಕ್ಷಣದ ಅಗತ್ಯವಿದೆ" ಎಂದು ಹೊಲೋಗ್ರಾಮ್‌ ಹೇಳಿದೆ. 

ಪ್ಯಾನೆಲ್ ಚರ್ಚೆಗೆ ಮೊದಲು, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಸಂದೇಶವನ್ನು ಓದಿದ್ದರು.

ಯುದ್ಧದ ಕಾಲದಲ್ಲಿ ಗಾಂಧಿಯವರ ಜೀವನ ಎಲ್ಲರಿಗೂ ಪ್ರೇರಣೆ. ಶಾಂತಿಯುತ ಮತ್ತು ಸಹಿಷ್ಣುತೆಯ ಮಾರ್ಗವನ್ನು ಶಿಕ್ಷಣದ ಮೂಲಕ ಗಾಂಧಿ ತೋರಿಸಿದ್ದಾರೆ ಎಂದು ಗುಟೆರಸ್‌  ಹೇಳಿದ್ದಾರೆ. ವಿಶ್ವಸಂಸ್ಥೆಯ ಮುಖ್ಯಸ್ಥರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ಮಾರ್ಗದಲ್ಲಿ ಒಟ್ಟಾಗಿ, ಒಗ್ಗಟ್ಟಿನಿಂದ, ಒಂದು ಮಾನವ ಕುಟುಂಬವಾಗಿ ನಡೆಯಲು ಗುಟೆರಸ್‌ ಕರೆ ನೀಡಿದರು.

"ಮಹಾತ್ಮಾ ಗಾಂಧೀಜಿಯವರ ಸಂದೇಶವು ಶಾಂತಿ ಮತ್ತು ಪ್ರೀತಿಯ ಸಂದೇಶ. ಇದು ಜಗತ್ತಿಗೆ ಇಂದು ತೀರಾ ಅಗತ್ಯ. ತಂತ್ರಜ್ಞಾನದ ಭಾಷೆಯ ಮೂಲಕ ಪ್ರಪಂಚದ ಯುವಜನತೆಗೆ ಅದನ್ನು ತಲುಪಿಸಲು ನಮ್ಮ ಸಣ್ಣ ಪ್ರಯತ್ನ"ಎಂದು ವಿಶ್ವಸಂಸ್ಥೆಯಲ್ಲಿ ಉಪಸ್ಥಿತರಿದ್ದ ಹೈದರಾಬಾದ್‌ನಲ್ಲಿರುವ ಮಹಾತ್ಮ ಗಾಂಧಿ ಡಿಜಿಟಲ್ ಮ್ಯೂಸಿಯಂನ ನಿರ್ದೇಶಕ ಬಿರಾದ್ ಯಾಜ್ನಿಕ್ ಹೇಳಿದ್ದಾರೆ.

"ಅಂತಾರಾಷ್ಟ್ರೀಯ ಅಹಿಂಸಾ ದಿನವು ಗಾಂಧಿಯವರ ಜನ್ಮದಿನ ಮಾತ್ರವಲ್ಲ, ದಶಕಗಳಾದ್ಯಂತ ಪ್ರತಿಧ್ವನಿಸುವ ಮೌಲ್ಯಗಳು. ಶಾಂತಿ, ಪರಸ್ಪರ ಗೌರವ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಹಂಚಿಕೊಂಡಿರುವ ಅತ್ಯಗತ್ಯ ಘನತೆಯನ್ನು ಆಚರಿಸುತ್ತದೆ" ಎಂದು ಗುಟೆರಸ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

“ದುಃಖದ ವಿಷಯವೆಂದರೆ, ನಮ್ಮ ಜಗತ್ತು ಆ ಮೌಲ್ಯಗಳಿಗೆ ತಕ್ಕಂತೆ ಜೀವಿಸುತ್ತಿಲ್ಲ. ಮಾನವರ ನಡುವೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಪ್ರೀತಿಯಿಂದ ಇರಬೇಕಾದ ವಾತಾವರಣ ದ್ವೇಷದಿಂದ ಕಲುಷಿತಗೊಂಡಿದೆ. ಬಡತನ, ಹಸಿವು ಹಾಗೂ ಅಸಮಾನತೆಗಳು ಪ್ರಪಂಚದಲ್ಲಿ ತಾಂಡವವಾಡುತ್ತಿವೆ. ಪೂರ್ವಗ್ರಹ, ವರ್ಣಭೇದ ನೀತಿ, ಹೆಚ್ಚುತ್ತಿರುವ ದ್ವೇಷದ ಮಾತು, ನೈತಿಕವಾಗಿ ದಿವಾಳಿಯಾದ ಜಾಗತಿಕ ಹಣಕಾಸು ವ್ಯವಸ್ಥೆಯಿಂದಾಗಿ ಎಲ್ಲರ ಮನೆಯಲ್ಲೂ ಬಡತನ ಇನ್ನಷ್ಟು ಶಾಶ್ವತಗೊಂಡಿದೆ. ಈ ಜಾಗತಿಕ ಬಡತನದಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಹಸಿವಿನಿಂದ ನರಳುತ್ತಿವೆ. ಹೀಗಾಗಿ ಗಾಂಧಿಯ ಪ್ರೀತಿಯ ಮಾರ್ಗದಲ್ಲಿ ನಡೆಯಬೇಕಿದೆ. ಗಾಂಧಿಯವರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಎಲ್ಲರಿಗೂ ಶಾಂತಿಯ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಆಹಿಂಸೆ ಎಂಬುವುದು ಸಂಸ್ಕೃತಿಗಳು ಮತ್ತು ಗಡಿಗಳನ್ನು ಮೀರಿ ಜಾಗತಿಕ ಸವಾಲುಗಳನ್ನು ಸೋಲಿಸಲಿದೆ" ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಒತ್ತಿ ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ವಿಶ್ವ ಅನುವಾದ ದಿನ: ಅನುವಾದ; ಗೋಡೆಗಳ ನಡುವೆ ಮೂಡಿದ ಬಾಗಿಲು

"ಎಲ್ಲಾ ಜನರ ಹಕ್ಕುಗಳು ಮತ್ತು ಘನತೆಯನ್ನು ಭದ್ರಪಡಿಸುವ ಹಾಗೂ ಎತ್ತಿಹಿಡಿಯುವ ಮೂಲಕ- ವಿಶೇಷವಾಗಿ ಅತ್ಯಂತ ದುರ್ಬಲ, ಸಮುದಾಯ, ಮಹಿಳೆಯರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ  ಮೂಲಕ, ಬಹುಸಂಸ್ಕೃತಿ, ಬಹು- ಧಾರ್ಮಿಕ  ಹಾಗೂ ಬಹು-ಜನಾಂಗೀಯನ್ನು ಸೃಷ್ಟಿ ಮಾಡುವುದು ಗಾಂಧಿಯ ಯೋಚನೆಯಾಗಿತ್ತು" ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app