ಇರಾನ್‌ ಹಿಜಾಬ್‌ ಆಂದೋಲನ | ಸಾರ್ವಜನಿಕವಾಗಿ ಹಿಜಾಬ್‌ ತೆಗೆದ ನಟಿಯ ಬಂಧನ

Iran Hijab Movement | Actress arrested for not wearing hijab in public
  • ಹಿಜಾಬ್‌ ವಿರೋಧಿ ಆಂದೋಲನವಾಗಿ ಮಾರ್ಪಟ್ಟಿರುವ ಮಹ್ಸಾ ಅಮಿನಿ ಸಾವು
  • ಇರಾನ್‌ ಹಿಜಾಬ್‌ ವಿರೋಧಿ ಹೋರಾಟವನ್ನು ಗಲಭೆಗಳೆಂದು ಧೂಷಿಸಿದ ಸರ್ಕಾರ

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರವಾಗಿದ್ದು, ಈ ಬೆಳವಣಿಗೆಯಲ್ಲಿ ಸಾರ್ವಜನಿಕವಾಗಿ ತಲೆಯ ಸ್ಕಾರ್ಫ್‌ ತೆಗೆದ ಪ್ರಮುಖ ನಟಿಯನ್ನು ಇರಾನ್ ಸರ್ಕಾರ ಬಂಧಿಸಿದೆ. 

ಹಿಜಾಬ್‌ ವಿರೋಧಿ ಹೋರಾಟವನ್ನು ಗಲಭೆಗಳೆಂದು ಕರೆಯುತ್ತಿರುವ ಇರಾನ್‌ ಸರ್ಕಾರ, ದೇಶದ ಪಾಶ್ಚಿಮಾತ್ಯ ವೈರಿಗಳು ಅವುಗಳನ್ನು ಪ್ರಚೋದಿಸುತ್ತಿದ್ದಾರೆ ಎಂದೂ ಆರೋಪಿಸಿದೆ. ಇದೀಗ ನಟಿ ಹೆಂಗಮೆಹ್ ಘಜಿಯಾನಿ ಅವರನ್ನು ಬಂಧಿಸಲಾಗಿದೆ. ಹೆಂಗಮೆಹ್ ಘಜಿಯಾನಿ ಅವರು ‘ಗಲಭೆಗಳನ್ನು’ ಪ್ರಚೋದಿಸುತ್ತಿದ್ದಾರೆ ಮತ್ತು ವಿರೋಧಿಗಳೊಂದಿಗೆ ಸಂವಹನ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ.

52 ವರ್ಷದ ಚಲನಚಿತ್ರ ತಾರೆ ಹೆಂಗಮೆಹ್ ಘಜಿಯಾನಿ ಈಗಾಗಲೇ ನ್ಯಾಯಾಂಗದಿಂದ ತನಗೆ ಸಮನ್ಸ್ ನೀಡಲಾಗಿದೆ ಎಂದು ಹೇಳಿದ್ದರು. ನಂತರ ಹಿಜಾಬ್ ಅನ್ನು ತೆಗೆಯುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಅಲ್ಲದೆ, “ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು” ಎಂದು ಬರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಆಂದೋಲನ | ಮೂವರು ನಾಗರಿಕರನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

“ಈ ಕ್ಷಣದಿಂದ, ನನಗೆ ಏನೇ ಆದರೂ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇರಾನ್ ಜನರೊಂದಿಗೆ ಇರುತ್ತೇನೆ ಎಂದು ತಿಳಿಯಿರಿ” ಎಂದು ನಟಿ ಹೆಂಗಮೆಹ್ ಘಜಿಯಾನಿ ಹೇಳಿದ್ದಾರೆ.

ಹಿಜಾಬ್‌ ವಿರೋಧಿ ಆಂದೋಲನದ ಆರಂಭ

ಮಹ್ಸಾ ಅಮಿನಿ ಸಾವು ಹಿಜಾಬ್‌ ವಿರೋಧಿ ಆಂದೋಲನವಾಗಿ ಮಾರ್ಪಟ್ಟಿತು. ಶತಮಾನಗಳಿಂದ ಇಸ್ಲಾಮಿಕ್‌ ಕಾನೂನು ಕಟ್ಟಳೆಗಳಿಂದ ನೊಂದಿರುವ ಇರಾನಿನ ಮಹಿಳೆಯರು ಈ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವಂತಹ ಪ್ರತಿಭಟನೆ ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ.

ಅಮಿನಿ ಮೃತಪಟ್ಟ ಮೂರು ವಾರಗಳ ನಂತರ ಮಹ್ಸಾ ಅಮಿನಿ ಸಾವಿನ ಕುರಿತಾಗಿ ಇರಾನ್‌ ಸರ್ಕಾರ ಮಾತನಾಡಿದ್ದು, ಮಹ್ಸಾ ಅಮಿನಿ ಅನಾರೋಗ್ಯ ಕಾರಣದಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಅಕ್ಟೋಬರ್‌ 7ರಂದು ತಿಳಿಸಿತ್ತು. ಮಹ್ಸಾ ಅಮಿನಿ ಅವರ ಸಾವು ಅನಾರೋಗ್ಯದಿಂದ ಉಂಟಾಗಿದೆ. ಅವರ ತಲೆ ದೇಹದ ಭಾಗಗಳಿಗೆ ಯಾವುದೇ ಹೊಡೆತ ಬಿದ್ದಿರುವ ಗುರುತುಗಳಿಲ್ಲ ಎಂದು ಸರ್ಕಾರ ಹೇಳಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180