ಇರಾನ್‌ ಹಿಜಾಬ್‌ ಆಂದೋಲನ | ನಿಲ್ಲದ ಹಿಂಸಾಚಾರ; 75 ಮಹಿಳೆಯರು ಪೊಲೀಸ್ ದೌರ್ಜನ್ಯಕ್ಕೆ ಬಲಿ

  • ಇರಾನಿನ 80 ನಗರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ
  • ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪ್ರಕಟ

ಕಳೆದ ಒಂದು ವಾರದಿಂದ ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, 24 ಗಂಟೆಗಳಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಸಾವಿಗೀಡಾಗಿದ್ದಾರೆ. ಈ ಮೂಲಕ ಪ್ರತಿಭಟನಾನಿರತ ಮಹಿಳೆಯರ ಸಾವಿನ ಸಂಖ್ಯೆ 75ಕ್ಕೆ ಏರಿದೆ. ಇದಲ್ಲದೇ 750ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

22 ವರ್ಷದ ಮಹ್ಸಾ ಅಮಿನಿ ಹಿಜಾಬ್ ತೊಡದೆ ಬಹಿರಂಗವಾಗಿ ಕಾಣಿಸಿಕೊಂಡಾಗ ನೈತಿಕ ಪೊಲೀಸ್ ಪಡೆಗಳ ಬಂಧನಕ್ಕೆ ಒಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಇರಾನ್ ಮಹಿಳೆಯರು ಹುದುಗಿಟ್ಟಿದ್ದ ಆಕ್ರೋಶ- ದುಗುಡಗಳನ್ನು ಬಹಿರಂಗವಾಗಿ ಪ್ರಕಟಿಸುತ್ತಿದ್ದಾರೆ. ಹಿಜಾಬ್‌ನಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ. ಅದನ್ನು ತೊಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. 

Eedina App

ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಆಂದೋಲನ | ತಲೆ ಕೂದಲು ಕತ್ತರಿಸಿ ಸಹೋದರನ ಸಮಾಧಿಗೆ ಅರ್ಪಿಸಿದ ಮಹಿಳೆ

ಕಳೆದ ಒಂದು ವಾರದಿಂದ ಇರಾನಿನ 80 ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ ಸಾವಿರಾರು ಮಂದಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇರಾನ್‌ನಲ್ಲಿ ಹಿಜಾಬ್ ಪರ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆ ಕೂಗಿರುವುದಾಗಿ ಮಾಧ್ಯಮಗಳು ತಿಳಿಸಿವೆ.

AV Eye Hospital ad

ಸಹೋದರನ ಸಮಾಧಿಗೆ ಕೂದಲು ಅರ್ಪಿಸಿದ ಸಹೋದರಿ

ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ನಡೆದ ಉಗ್ರ ಪ್ರತಿಭಟನೆಯ ವೇಳೆ ಪೊಲೀಸರ ದೌರ್ಜನ್ಯಕ್ಕೆ ಬಲಿಯಾಗಿ ಸಾವನ್ನಪ್ಪಿದ ಜವಾದ್ ಹೇದರಿ ಎಂಬ ವ್ಯಕ್ತಿಯ ಸಹೋದರಿ ತನ್ನ ಕೂದಲು ಕತ್ತರಿಸಿ ಅತನ ಸಮಾಧಿಯ ಮೇಲೆ ಹಾಕುತ್ತಿರುವ ವಿಡಿಯೋ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇರಾನ್‌ ವಸ್ತ್ರ ಸಹಿಂತೆ

1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಅಧಿಕಾರಿಗಳು ಕಡ್ಡಾಯವಾದ ಉಡುಪಿ ಸಂಹಿತೆ ಹೇರಿದ್ದರು. ಇದರಂತೆ ಎಲ್ಲ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ ಮತ್ತು ಸಡಿಲ ಬಟ್ಟೆಗಳನ್ನು ಧರಿಸಬೇಕು ಎಂಬ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತು. ಇರಾನ್‌ನಲ್ಲಿ ಮಹಿಳೆಯರ ಮೇಕಪ್‌, ಬಟ್ಟೆ, ಕೂದಲು ಎಲ್ಲವನ್ನೂ ಗಮನಿಸುತ್ತಾರೆ. ಇವುಗಳಿಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೂ ಸಹ ದಂಡ ಅಥವಾ ಶಿಕ್ಷೆ ನೀಡಲಾಗುತ್ತದೆ.

2014ರಲ್ಲಿ ಇರಾನ್ ಮಹಿಳೆಯರು "ಮೈ ಸ್ಟೆಲ್ತಿ ಫ್ರೀಡಮ್" ಎಂಬ ಆನ್‌ಲೈನ್ ಪ್ರತಿಭಟನಾ ಅಭಿಯಾನದ ಭಾಗವಾಗಿ ಹಿಜಾಬ್ ಕಾನೂನುಗಳನ್ನು ಸಾರ್ವಜನಿಕವಾಗಿ ಉಲ್ಲಂಘಿಸುವ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು "ವೈಟ್ ಬುಧವಾರಗಳು" ಮತ್ತು "ಗರ್ಲ್ಸ್ ಆಫ್ ರೆವಲ್ಯೂಷನ್ ಸ್ಟ್ರೀಟ್" ಸೇರಿದಂತೆ ಇತರ ಚಳವಳಿಗಳಿಗೆ ಸ್ಫೂರ್ತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app