ಮೊದಲ ಬಾರಿಗೆ ಟರ್ಕಿಗೆ ರಾಯಭಾರಿ ನೇಮಕ ಮಾಡಿದ ಇಸ್ರೇಲ್‌

  • ಟರ್ಕಿ ಬಿಟ್ಟು ತೆರಳುವಂತೆ ಇಸ್ರೇಲ್ ರಾಯಭಾರಿಗೆ ಸೂಚಿಸಲಾಗಿತ್ತು
  • ಇಸ್ರೇಲ್‌ನಿಂದ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದ್ದ ಟರ್ಕಿ

ಕಳೆದ 4 ವರ್ಷದಲ್ಲಿ ಮೊದಲ ಬಾರಿಗೆ ಟರ್ಕಿಗೆ ಇಸ್ರೇಲ್ ತನ್ನ ರಾಯಭಾರಿಯನ್ನು ನೇಮಿಸಿದೆ. 2 ವರ್ಷದಿಂದ ಟರ್ಕಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಇರಿತ್ ಲಿಲಿಯನ್, ಇನ್ನು ಮುಂದೆ ಟರ್ಕಿಗೆ ಇಸ್ರೇಲ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಸ್ರೇಲ್‌ನ ವಿದೇಶಾಂಗ ಇಲಾಖೆ ತಿಳಿಸಿದೆ. 

ಗಾಝಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಪ್ಯಾಲೆಸ್ತೀನಿಯರನ್ನು  ಇಸ್ರೇಲ್ ಸೇನೆ ಹತ್ಯೆ ನಡೆಸಿದ್ದ ಹಿನ್ನೆಲೆಯಲ್ಲಿ 2018ರಲ್ಲಿ ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದ್ದ ಟರ್ಕಿ, ದೇಶ ಬಿಟ್ಟು ತೆರಳುವಂತೆ ಇಸ್ರೇಲ್ ರಾಯಭಾರಿಗೆ ಸೂಚಿಸಿತ್ತು. ಇದಾದ ನಂತರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಳಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಮೈತ್ರಿಗಳು ಬದಲಾದ ಹಿನ್ನೆಲೆಯಲ್ಲಿ ಇಸ್ರೇಲ್- ಟರ್ಕಿ ನಡುವಿನ ಸಂಬಂಧ ಸುಧಾರಣೆಗೆ ಉಭಯ ದೇಶಗಳ ಮುಖಂಡರು ಪ್ರಯತ್ನ ನಡೆಸಿದ್ದಾರೆ.‌

ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಅಂದೋಲನ | ಕೂದಲು ಕತ್ತರಿಸಿಕೊಂಡ ಮಹಿಳೆಗೆ ಹಾರ್ನ್‌ ಬೆಂಬಲ ಸೂಚಿಸಿದ ನಾಗರಿಕರು

ಫೆಬ್ರವರಿಯಲ್ಲಿ ಟರ್ಕಿ ಮೇಲೆ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಸೇನಾ ನೆಲೆಗಳು ಧ್ವಂಸಗೊಂಡಿದ್ದವು. ಕ್ಷಿಪಣಿಗಳನ್ನು ಇಸ್ರೇಲ್ ಆಕ್ರಮಿತ ಸಿರಿಯಾ ಪ್ರದೇಶವಾದ ಗೋಲನ್ ಹೈಟ್ಸ್‌ನಿಂದ ಹಾರಿಸಲಾಗಿದೆ ಎಂದು ಸಿರಿಯಾದ ಮಿಲಿಟರಿ ಅಧಿಕಾರಿಯನ್ನು ಉಲ್ಲೇಖಿಸಿ 'ಸ್ಟೇಟ್ ಟಿವಿ' ವರದಿ ಮಾಡಿತ್ತು.

ಇಸ್ರೇಲ್ 1967ರ ಯುದ್ಧದಲ್ಲಿ ಸಿರಿಯಾದಿಂದ ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಸಂಪೂರ್ಣ ಪ್ರದೇಶವನ್ನು ಆಕ್ರಮಿಸಿದೆ. ಗೋಲನ್ ಹೈಟ್ಸ್  ಪ್ರದೇಶವನ್ನು ಹಿಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇಸ್ರೇಲ್‌ನ ಭಾಗವೆಂದು ಘೋಷಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್