ಮಲೇಷ್ಯಾ | ಯಾರಿಗೂ ಸಿಗದ ಬಹುಮತ ; ’ಐಕ್ಯತಾ ಸರ್ಕಾರ‘ ರಚಿಸಲು ಆದೇಶ ನೀಡಿದ ದೊರೆ ಸುಲ್ತಾನ್‌ ಅಬ್ದುಲ್ಲಾ

Malaysia | A majority that no one can get; Ruler Sultan Abdullah ordered the formation of a 'unity government'.
  • ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟಕ್ಕೆ ಬಹುಮತ ಬಂದಿರಲಿಲ್ಲ
  • ವಿಪಕ್ಷ ನಾಯಕ ಅನ್ವರ್‌ ಇಬ್ರಾಹಿಂರನ್ನು 10ನೇ ಪ್ರಧಾನಿಯಾಗಿ ನೇಮಕ ಮಾಡಿದ ದೊರೆ

ಮಲೇಷ್ಯಾದಲ್ಲಿ ತಲೆದೂರಿದ್ದ ರಾಜಕೀಯ ಅಸ್ಥಿರತೆಗೆ ದೊರೆ ಸುಲ್ತಾನ್‌ ಅಬ್ದುಲ್ಲಾ ಅಂತ್ಯ ಕಲ್ಪಿಸಿದ್ದಾರೆ. ಯಾವುದೇ ಪಕ್ಷಗಳಿಗೆ ಬಹುಮತ ಬಾರದ ಹಿನ್ನೆಲೆಯಲ್ಲಿ, ಸರ್ವ ಪಕ್ಷಗಳು ಸೇರಿ ’ಐಕ್ಯತಾ ಸರ್ಕಾರ‘ ರಚಿಸಿ ಎಂದು ಆದೇಶಿಸಿದ್ದಾರೆ.

ವಿಪಕ್ಷ ನಾಯಕ ಅನ್ವರ್‌ ಇಬ್ರಾಹಿಂ ಪಕ್ಷ ಅತೀ ಹೆಚ್ಚು ಸ್ಥಾನ ಗಳಿಸಿದ್ದರಿಂದ, ಇಬ್ರಾಹಿಂ ಅವರನ್ನೇ 10ನೇ ಪ್ರಧಾನಿಯಾಗಿ ನೇಮಕ ಮಾಡಿ ಎಂದು ಆದೇಶಿಸಿದ್ದಾರೆ.

‘ಮಲೈ ರಾಜಮನೆತನದ ಅಭಿಪ್ರಾಯಗಳನ್ನು ಪಡೆದ ಬಳಿಕ, ಅನ್ವರ್‌ ಇಬ್ರಾಹಿಂ ಅವರನ್ನು 10ನೇ ಪ್ರಧಾನಿಯಾಗಿ ನೇಮಿಸಿ, ದೊರೆ ಸುಲ್ತಾನ್‌ ಅಬ್ದುಲ್ಲಾ ಆದೇಶ ಹೊರಡಿಸಿದ್ದಾರೆ' ಎಂದು ಮಲೇಷ್ಯಾದ ಅರಮನೆ ಬಿಡುಗಡೆ ಮಾಡಿದ ಪತ್ರಿಕಾ ‍‍ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟಕ್ಕೆ  ಬಹುಮತ ಬಾರದ ಕಾರಣ, ಪ್ರಧಾನಿಯನ್ನು ಆಯ್ಕೆ ಮಾಡುವ ಹೊಣೆ ದೊರೆ, ಸುಲ್ತಾನ್‌ ಅಬ್ದುಲ್ಲಾ ಸುಲ್ತಾನ್‌ ಅಹ್ಮದ್‌ ಶಾ ಅವರ ಮೇಲಿತ್ತು. ಹೀಗಾಗಿ ವಿಪಕ್ಷ ನಾಯಕ ಅನ್ವರ್‌ ಇಬ್ರಾಹಿಂ ಅವರನ್ನು ಪ್ರಧಾನಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಅನ್ವರ್‌ ನೇತೃತ್ವದ ಮೈತ್ರಿಕೂಟ (ಪಕತನ್‌ ಹರಪನ್‌) 82 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಮಾಜಿ ಪ್ರಧಾನಿ ಮುಹ್ಯುದ್ದೀನ್‌ ಯಾಸೀನ್‌ ಅವರ ಮೈತ್ರಿಕೂಟ (ಪೆರಿಕತನ್‌ ನ್ಯಾಸಿನಲ್) 73 ಸೀಟುಗಳಲ್ಲಿ ಗೆಲುವು ಪಡೆದಿತ್ತು.

ಈ ಸುದ್ದಿ ಓದಿದ್ದೀರಾ? ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ : ಸೌದಿ ಯುವರಾಜನ ವಿರುದ್ಧ ಕ್ರಮ ಕೈಗೊಳ್ಳದ ಅಮೆರಿಕ; ಟೀಕೆಗೆ ಗುರಿಯಾದ ಬೈಡನ್

ಬಹುಮತಕ್ಕೆ 112 ಸೀಟುಗಳು ಬೇಕಿದ್ದು, ಉಭಯ ಮೈತ್ರಿಕೂಟಗಳು ಬಹುಮತ ಪಡೆಯುವಲ್ಲಿ ವಿಫಲವಾಗಿದ್ದವು. ಆದರೆ ಪ್ರತಿಪಕ್ಷ ನಾಯಕ ಅನ್ವರ್‌ ಇಬ್ರಾಹಿಂ ಅವರ ಬಣಕ್ಕೆ 82,  ಸೀಟುಗಳು ಲಭ್ಯವಾದರೆ, ಮುಹ್ಯುದ್ದೀನ್‌ ಯಾಸೀನ್‌ ಬಣಕ್ಕೆ 73 ಸ್ಥಾನ ದೊರೆತಿತ್ತು. ಇನ್ನೊಂದೆಡೆ, ಬೊರ್ನಿಯೊ ದ್ವೀಪದ ಎರಡು ರಾಜ್ಯಗಳಲ್ಲಿ ಇತರೆ ಬಣಗಳು 28 ಸ್ಥಾನಗಳನ್ನು ಗೆದ್ದಿದ್ದವು. ಇವು ಯಾಸೀನ್‌ ಅವರಿಗೆ ಬೆಂಬಲ ಸೂಚಿಸಿತ್ತು. ಆದರೂ ಬಹುಮತಕ್ಕೆ ಬೇಕಾದ ಸ್ಥಾನಗಳು ಯಾಸೀನ್‌ ಬಣದ ಬಳಿ ಇರಲಿಲ್ಲ. ಹೀಗಾಗಿ ಮಲೇಷ್ಯಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180