
- ಮಾಲೆಯಲ್ಲಿನ ವಿದೇಶಿ ಕೆಲಸಗಾರರು ಉಳಿದುಕೊಳ್ಳಲು ನಿರ್ಮಿಸಿರುವ ವಾಸಸ್ಥಳ
- ಬೆಂಕಿ ನಂದಿಸಲು ಸುಮಾರು ನಾಲ್ಕು ಗಂಟೆ ಹರಸಾಹಪಟ್ಟ ಅಗ್ನಿಶಾಮಕ ದಳ
ಪ್ರಸಿದ್ಧ ಪ್ರವಾಸಿ ತಾಣ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 10 ಮಂದಿ ಸಜೀವವಾಗಿ ದಹನಗೊಂಡಿದ್ದು, ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ.
ಮಾಲೆಯಲ್ಲಿನ ವಿದೇಶಿ ಕೆಲಸಗಾರರರು ಉಳಿದುಕೊಳ್ಳಲು ನಿರ್ಮಿಸಿರುವ ವಾಸಸ್ಥಳದಲ್ಲಿ ಈ ಅನಾಹುತ ಸಂಭವಿಸಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ನೆಚ್ಚಿನ ದ್ವೀಪ ಸಮೂಹದ ರಾಜಧಾನಿ ಮಾಲೆ, ಜಗತ್ತಿನ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದು ಎನಿಸಿದೆ.
ಬೆಂಕಿಯ ಜ್ವಾಲೆಗಳಿಂದ ಸುಟ್ಟು ಕರಕಲಾಗಿರುವ ಕಟ್ಟಡದ ಮೇಲಿನ ಮಹಡಿಯಿಂದ ಹತ್ತು ಮೃತದೇಹಗಳು ಕಂಡುಬಂದಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದ ಕೆಳಭಾಗದಲ್ಲಿದ್ದ ವಾಹನ ದುರಸ್ತಿ ಗ್ಯಾರೇಜ್ನಲ್ಲಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.
#Breaking 10 dead in a fire that broke out in Male in a cramped immigration quarter. Indians too lived there @NewIndianXpress @TheMornStandard
— Yeshi Seli ਯੇਸ਼ੀ ਸੇਲੀ (@YeshiSeli) November 10, 2022
"ಬೆಂಕಿ ನಂದಿಸಲು ಸುಮಾರು ನಾಲ್ಕು ಗಂಟೆ ಹಿಡಿದಿದೆ. ನಮಗೆ 10 ದೇಹಗಳು ಸಿಕ್ಕಿವೆ" ಎಂದು ಅಗ್ನಿಶಾಮಕ ಅಧಿಕಾರಿಯೋರ್ವರು ಹೇಳಿದ್ದಾರೆ. ಮೃತಪಟ್ಟವರಲ್ಲಿ 9 ಮಂದಿ ಭಾರತೀಯ ಮೂಲದವರಾಗಿದ್ದಾರೆ. ಒಬ್ಬ ಬಾಂಗ್ಲಾದೇಶದ ಪ್ರಜೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೀನಾ | ಯುದ್ಧಕ್ಕೆ ಸನ್ನದ್ಧವಾಗುವಂತೆ ಸೇನೆಗೆ ಕರೆ ನೀಡಿದ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ವಿದೇಶಿ ಕಾರ್ಮಿಕರಿಗೆ ಸರ್ಕಾರ ಒದಗಿಸಿರುವ ಸೌಲಭ್ಯಗಳು ಮತ್ತು ಅವರ ಸ್ಥಿತಿಗತಿಯ ಕುರಿತಂತೆ ಮಾಲ್ಡೀವ್ಸ್ನ ರಾಜಕೀಯ ಪಕ್ಷಗಳು ಟೀಕಾಪ್ರಹಾರ ನಡೆಸಿವೆ.
ಮಾಲೆಯ 2.50 ಲಕ್ಷ ಜನಸಂಖ್ಯೆಯಲ್ಲಿ ಹೆಚ್ಚಿನವರು ವಿದೇಶಿ ಕೆಲಸಗಾರರೇ ಇದ್ದಾರೆ. ಅವರಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾದ ನಾಗರಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಭಾರತ ಸೇರಿದಂತೆ ವಿವಿಧ ದೇಶಗಳಿಂದ ಮಾಲ್ಡೀವ್ಸ್ಗೆ ಬಂದು ಉದ್ಯೋಗ ಮಾಡುವ ಕೆಲಸಗಾರರ ಸ್ಥಿತಿ ಹೀನಾಯವಾಗಿರುವುದು ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಸ್ಥಳೀಯರಿಗೆ ಹೋಲಿಸಿದರೆ ವಿದೇಶಿ ಕಾರ್ಮಿಕರ ನಡುವೆ ಅತಿ ವೇಗವಾಗಿ ಅಂದು ಕೋವಿಡ್ ಸೋಂಕು ಹರಡಿತ್ತು.