ಮೆಕ್ಸಿಕೋದ ರೆಸ್ಟೋರೆಂಟ್‌ವೊಂದರಲ್ಲಿ ಗುಂಡಿನ ದಾಳಿ: 10 ಮಂದಿ ಸಾವು

  • ರೆಸ್ಟೋರೆಂಟ್‌ಗೆ ಏಕಾಏಕಿ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ ದುಷ್ಕರ್ಮಿಗಳು
  • ಕಳೆದ ಮಾರ್ಚ್‌ನಲ್ಲಿ ಮೆಕ್ಸಿಕೋದಲ್ಲಿ 19 ನಾಗರಿಕರನ್ನು ಗುಂಡಿಕ್ಕಿ  ಹತ್ಯೆ ಮಾಡಲಾಗಿತ್ತು

ಮೆಕ್ಸಿಕೋದ ಸೆಂಟ್ರಲ್ ರೆಸ್ಟೋರೆಂಟ್‌ವೊಂದರಲ್ಲಿ  (ಗುರುವಾರ) ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 4 ತಿಂಗಳಲ್ಲಿ ಮೆಕ್ಸಿಕೋದಲ್ಲಿ ನಡೆದ ಐದನೇ ದಾಳಿ ಇದಾಗಿದೆ.

'ರೆಸ್ಟೋರೆಂಟ್‌ಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದರು. ನಾವು ಓಡಿಹೋಗುವ ಪ್ರಯತ್ನ ಮಾಡಿದೆವು' ಎಂದು ಪ್ರತ್ಯಕ್ಷದರ್ಶಿಯೊಬ್ಬರೂ ಹೇಳಿದ್ದಾರೆ. 

ಮೆಕ್ಸಿಕೋದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂಬುವುದು ಇನ್ನೂ  ಸ್ಪಷ್ಟವಾಗಿಲ್ಲ. ಅಪರಾಧಿಗಾಗಿ ಶೋಧಕಾರ್ಯ ಆರಂಭಿಸಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಜಗತ್ತಿನ ಮೂರನೇ ಆರ್ಥಿಕತೆಯಾಗಲಿದೆ ಭಾರತ : ʼಜೊತೆಯಾಗಿ ಕೆಲಸ ಮಾಡೋಣʼ ಎಂದ ಇಂಗ್ಲೆಂಡ್‌

ಕಳೆದ ಮಾರ್ಚ್‌ನಲ್ಲಿ ಸೆಂಟ್ರಲ್ ಮೆಕ್ಸಿಕೋದಲ್ಲಿ 19 ನಾಗರಿಕರನ್ನು ಗುಂಡಿಕ್ಕಿ  ಹತ್ಯೆ ಮಾಡಲಾಗಿತ್ತು . ಇದಾದ ಬಳಿಕ ಸರ್ಕಾರ ಸಾರ್ವಜನಿಕವಾಗಿ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿತ್ತು. ಮೇ ತಿಂಗಳಿನಲ್ಲಿ  ಮೆಕ್ಸಿಕೋದ ಸೆಂಟ್ರಲ್ ಸಿಟಿ ಸಿಲೆಯಾದಲ್ಲಿ ಹೋಟೆಲ್ ಮತ್ತು ಎರಡು ಬಾರ್‌ಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ 10 ಮಂದಿಯನ್ನು ಹತ್ಯೆ ಮಾಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್