ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ : ಸೌದಿ ಯುವರಾಜನ ವಿರುದ್ಧ ಕ್ರಮ ಕೈಗೊಳ್ಳದ ಅಮೆರಿಕ; ಟೀಕೆಗೆ ಗುರಿಯಾದ ಬೈಡನ್

Senate Democrat calls on Biden to hold Saudi crown prince ‘accountable’ after immunity decision
  • ಖಶೋಗಿ ಭೀಕರ ಹತ್ಯೆಗೆ ಕಾರಣರಾದ ಸೌದಿ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ
  • ಹತ್ಯೆ ಮಾಡಿದ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸಲು ಬೈಡನ್ ಆಡಳಿತ ವಿಫಲ

2018ರಲ್ಲಿ ನಡೆದಿದ್ದ ಅಮೆರಿಕದ ಪತ್ರಕರ್ತ ಜಮಾಲ್‌ ಖಶೋಗಿ ಅವರ ಹತ್ಯೆಗೆ ಸಂಬಂಧಿಸಿದಂತೆ, ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಜೋ ಬೈಡನ್‌ ಸರ್ಕಾರ ವಿರುದ್ಧ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ.

ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಕಾನೂನುಗಳಿಂದ ಸಾಧ್ಯವಾಗುತ್ತಿಲ್ಲ. ಅಮೆರಿಕದ ಇತಿಹಾಸದಲ್ಲಿ ಈ ರೀತಿಯ ನಿರ್ಣಯ ಇದೇ ಮೊದಲು. ಜೋ ಬೈಡನ್‌ ಸರ್ಕಾರವೇ ಇದಕ್ಕೆ ಹೊಣೆಯಾಗಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿವೆ.

ಅಮೆರಿಕ ಪತ್ರಕರ್ತ ಜಮಾಲ್‌ ಕಶೋಗಿ ಹತ್ಯೆ ಮಾಡಿದ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸಲು ಬೈಡನ್ ಆಡಳಿತ ವಿಫಲವಾಗಿದೆ ಎಂದು ಅಮೆರಿಕದ ಮಾನವ ಹಕ್ಕುಗಳ ಸಂಸ್ಥೆ (ಹ್ಯೂಮನ್ ರೈಟ್ಸ್ ವಾಚ್) ಹೇಳಿದೆ.

ಖಶೋಗಿ ಭೀಕರ ಹತ್ಯೆಗೆ ಕಾರಣರಾದ ಸೌದಿ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಬೈಡನ್ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿಲ್ಲ. ಇದುವರೆಗೂ ಸೌದಿ ಸರ್ಕಾರದ ವಿರುದ್ಧ ಯಾವ ನಿರ್ಬಂಧಗಳನ್ನು ಅಮೆರಿಕ ಹೇರಿಲ್ಲ. ಅಮೆರಿಕದ ಮಿಲಿಟರಿ, ರಾಜತಾಂತ್ರಿಕತೆ ಹಾಗೂ ರಾಜಕೀಯ ನೀತಿಯನ್ನು  'ಹಸಿರು ದೀಪ' ಎಂದು ಜೋ ಬೈಡನ್‌ ತಿಳಿದುಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ  ಕುಟುಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180