
- ಸೋಮವಾರದಿಂದ ಆರಂಭಗೊಂಡಿರುವ ಮತ ಎಣಿಕೆ
- ಒಂದು ಬಾರಿಯೂ ಸೋಲು ಕಾಣದ ಅಧ್ಯಕ್ಷ ದೇವುಬಾ
ನೇಪಾಳ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಶ್ಚಿಮ ನೇಪಾಳದ ಡಡೆಲಧುರಾ ಕ್ಷೇತ್ರದಿಂದ 7ನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
77 ವರ್ಷದ ದೇವುಬಾ ಅವರು 25,534 ಮತಗಳನ್ನು ಪಡೆದರು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ದೇವುಬಾ ಅವರ ಸಮೀಪದ ಪ್ರತಿಸ್ಪರ್ಧಿ, 31 ವರ್ಷದ ಸಾಗರ್ ಧಾಕಲ್ ಅವರು ಕೇವಲ 1,302 ಮತಗಳನ್ನಷ್ಟೇ ಗಳಿಸಿದ್ದಾರೆ.
5 ದಶಕಗಳ ರಾಜಕೀಯ ಜೀವನದಲ್ಲಿ ದೇವುಬಾ ಅವರು ಲೋಕಸಭೆ ಚುನಾವಣೆಯಲ್ಲಿ ಒಂದು ಬಾರಿಯೂ ಸೋಲನ್ನು ಕಂಡಿಲ್ಲ. ಆಡಳಿತ ಪಕ್ಷ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ದೇವುಬಾ ನಾಲ್ಕು ಬಾರಿ ಪ್ರಧಾನಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೇಪಾಳದಲ್ಲಿ ಮತ್ತೆ ಭೂಕಂಪ | ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ
ಈ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದ್ದು, 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೆ ಪಿ ಒಲಿ ನೇತೃತ್ವದ ಸಿಪಿಎನ್-ಯುಎಂಎಲ್ ಪಕ್ಷವು 3 ಸ್ಥಾನಗಳನ್ನು ಗೆದ್ದಿದ್ದು, 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಭಾನುವಾರ ಮತದಾನ ನಡೆದಿದೆ. ಮತ ಎಣಿಕೆ ಸೋಮವಾರದಿಂದ ಆರಂಭಗೊಂಡಿದೆ.
ಸಿಇಸಿ ರಾಜೀವ್ ಕುಮಾರ್ಗೆ ಆಹ್ವಾನ
ನೇಪಾಳದಲ್ಲಿ ನ. 20ರಂದು ನಡೆದ ಸಂಸತ್ ಚುನಾವಣೆಗೆ ಅಂತಾರಾಷ್ಟ್ರೀಯ ವೀಕ್ಷಕರಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ.
ನೇಪಾಳಕ್ಕೆ ಭಾರತ ಅಗಾಗ ಸಹಾಯ ಹಸ್ತ ಚಾಚುತ್ತಿರುತ್ತದೆ. ಇದೇ ಸಹಾಯದ ಭಾಗವಾಗಿ ರಾಜೀವ್ ಕುಮಾರ್ ಅವರು ನ. 22ರವರೆಗೆ ನೇಪಾಳ ಪ್ರವಾಸ ಮಾಡಿದ್ದಾರೆ. ನ. 20ರ ಮತದಾನದಲ್ಲಿ 17.9 ಕೋಟಿ ಮಂದಿ ಮತದಾರರು 275 ಮಂದಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ.