ಸಮುದ್ರದತ್ತ ಎರಡು ಕ್ರೂಸ್‌ ಕ್ಷಿಪಣಿಗಳನ್ನು ಹಾರಿಸಿದ ಉತ್ತರ ಕೊರಿಯಾ

  • ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿದ ವಿಶ್ವಸಂಸ್ಥೆ
  • ಒಂದೇ ವರ್ಷದಲ್ಲಿ ಒಂಬತ್ತನೇ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಉತ್ತರ ಕೊರಿಯ ಬುಧವಾರ ಎರಡು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಆಗಸ್ಟ್‌ 17ರ ಮುಂಜಾನೆ ಉತ್ತರ ಕೊರಿಯಾವು ದಕ್ಷಿಣ ಪ್ಯೊಂಗಾನ್ ಪ್ರಾಂತ್ಯದ ಒಂಚೋನ್‌ನಿಂದ ಪಶ್ಚಿಮ ಸಮುದ್ರಕ್ಕೆ ಎರಡು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ" ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಮೆರಿಕ ಮತ್ತು ಸಿಯೋಲ್ ಅಧಿಕಾರಿಗಳ ಪ್ರಕಾರ ಕೊರಿಯಾ ತನ್ನ ಏಳನೇ ಪರಮಾಣು ಪರೀಕ್ಷೆಯನ್ನು ನಡೆಸಲು ತಯಾರಿ ನಡೆಸುತ್ತಿದೆ ಎಂದು ಎಚ್ಚರಿಸಿದ್ದಾರೆ. ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದರೂ ಸಹ ಉತ್ತರ ಕೊರಿಯಾ ನಿರಂತರವಾಗಿ ಸಾಲು, ಸಾಲು ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಫೆಲೆಸ್ತೀನ್ | ತಂದೆಯ ಕಣ್ಣ ಮುಂದೆಯೇ ಮಗನನ್ನು ಗುಂಡಿಟ್ಟು ಕೊಂದ ಇಸ್ರೇಲ್ ಸೈನಿಕರು

ಜುಲೈ 10ರಂದು ಉತ್ತರ ಕೊರಿಯಾ ಪ್ಯೊಂಗ್ಯಾಂಗ್ ಸಮುದ್ರದಲ್ಲಿ ತನ್ನ ಕೊನೆಯ ಶಸ್ತ್ರಾಸ್ತ್ರ ಪರೀಕ್ಷೆಯನ್ನು ನಡೆಸಿತ್ತು. 2017ರಿಂದ ಕೊರಿಯಾ ನಿರಂತರವಾಗಿ ಖಂಡಾಂತರ ಕ್ಷಿಪಣಿಗಳನ್ನು ಕಕ್ಷೆಗೆ ಹರಿಸುತ್ತಿದೆ.

ಈ ಮೊದಲು ವರ್ಷದ ಒಂಬತ್ತನೇ ಕ್ಷಿಪಣಿ ಪರೀಕ್ಷೆಯಾಗಿದೆ. ಉತ್ತರ ಕೊರಿಯಾ ಮಾರ್ಚ್‌5, 2022 ರಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಕೊರಿಯನ್ ಪರ್ಯಾಯ ದ್ವೀಪದ ಪೂರ್ವದಲ್ಲಿ ಸಮುದ್ರದತ್ತ ಹಾರಿಸಿತ್ತು. ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಪರೀಕ್ಷೆಯನ್ನು ಪತ್ತೆ ಹಚ್ಚಿರುವುದಾಗಿ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದರು. ಇದಕ್ಕೂ ಮೊದಲು ಕ್ಷಿಪಣಿಯನ್ನು ಜನವರಿ 29 ಹಾಗೂ ಫೆಬ್ರವರಿ 27 ರಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪರೀಕ್ಷಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್