ಪಾಕಿಸ್ತಾನ ಜಲಪ್ರಳಯ | ಆಹಾರ ಬಿಕ್ಕಟ್ಟು ಎದುರಿಸಲಿರುವ 5.7 ಮಿಲಿಯನ್‌ ಸಂತ್ರಸ್ತರು; ವಿಶ್ವಸಂಸ್ಥೆ ಎಚ್ಚರಿಕೆ

  • ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ
  • ಪಾಕಿಸ್ತಾನದಲ್ಲಿ ಆಹಾರ ಅಭದ್ರತೆಯನ್ನು ಉಲ್ಬಣಗೊಳಿಸುವ ಸಾಧ್ಯತೆ

ಪಾಕಿಸ್ತಾನದಲ್ಲಿ ಭೀಕರ ಪ್ರಳಯ ಉಂಟಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಿಂದ ಮಳೆ ಬಿಡದೆ ಸುರಿಯುತ್ತಿದ್ದು, ಸಂತ್ರಸ್ತ ತಾಣಗಳಲ್ಲಿರುವ ಸುಮಾರು 5.7 ದಶಲಕ್ಷ ಪಾಕಿಸ್ತಾನಿ ನಾಗರಿಕರು ಗಂಭೀರ ಆಹಾರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಸಂಸ್ಥೆ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್‌ಎ) ಶನಿವಾರ ತನ್ನ ಇತ್ತೀಚಿನ ವರದಿಯಲ್ಲಿ ಪ್ರಸ್ತುತ ಪ್ರವಾಹವು ಪಾಕಿಸ್ತಾನದಲ್ಲಿ ಆಹಾರ ಅಭದ್ರತೆ ಉಲ್ಬಣಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

Eedina App

ಪ್ರವಾಹ ಪೀಡಿತ ಪ್ರದೇಶಗಳಲ್ಲಿ 5.7 ಮಿಲಿಯನ್ ಜನರು ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಆಹಾರ ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರವಾಹಕ್ಕೂ ಮೊದಲು ಶೇ. 16ರಷ್ಟು ಮಾಧ್ಯಮ ವರ್ಗದ ಕುಟುಂಬಗಳು ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದರು.

ಪಾಕಿಸ್ತಾನದ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ ಪ್ರವಾಹದಿಂದಾಗಿ ಅಂದಾಜು 1,695 ಮಂದಿ ಸಾವನ್ನಪ್ಪಿದ್ದಾರೆ. 33 ಮಿಲಿಯನ್‌ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಎರಡು ಮಿಲಿಯನ್‌ಗಿಂತಲೂ ಹೆಚ್ಚಿನ ಮನೆಗಳು ನಾಶವಾಗಿವೆ. ಪ್ರಸ್ತುತ ಲಕ್ಷಾಂತರ ಮಂದಿ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

AV Eye Hospital ad

ಸಿಂಧ್ ಮತ್ತು ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ನೀರಿನಿಂದ ಹರಡುವ ಮತ್ತು ಇತರ ರೋಗಗಳು ಏಕಾಏಕಿ ಹೆಚ್ಚಾಗುತ್ತಿದೆ ಎಂದು ಓಸಿಎಚ್‌ಎ ಹೇಳಿದೆ. ಈ ಪ್ರದೇಶದಲ್ಲಿ ಪ್ರವಾಹ ಹೆಚ್ಚು ಹಾನಿಯನ್ನುಂಟುಮಾಡಿದೆ.

ಈ ಸುದ್ದಿ ಓದಿದ್ದೀರಾ? ಏಷ್ಯಾ ನೋಟ | ಐಟಿಯಲ್ಲಿ ಭಾರತ ಮುಂದು, ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಮುಂದು ಎಂದ ಜೈಶಂಕರ್

ವಿಶ್ವಸಂಸ್ಥೆಯ ಮಾನವೀಯ ಸಂಸ್ಥೆ  ಶನಿವಾರದ ವರದಿಯಲ್ಲಿ ಬಲೂಚಿಸ್ತಾನ್ ಮತ್ತು ಸಿಂಧ್‌ನಲ್ಲಿ ಕಳೆದ ವಾರದಲ್ಲಿ ಮಳೆಯು ಗಣನೀಯ ಕಡಿಮೆಯಾಗಿದೆ, ಏಕೆಂದರೆ ಚಳಿಗಾಲದ ಮೊದಲು ತಾಪಮಾನವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಹೇಳಿದೆ. ಸಿಂಧ್‌ನ 22 ಜಿಲ್ಲೆಗಳಲ್ಲಿ 18ರಲ್ಲಿ, ಪ್ರವಾಹದ ಮಟ್ಟವು ಕನಿಷ್ಠ ಶೇ. 34ರಷ್ಟು ಇಳಿದಿದೆ ಮತ್ತು ಕೆಲವು ಜಿಲ್ಲೆಗಳಲ್ಲಿ ಶೇ. 78ರವರೆಗೆ ಕಡಿಮೆಯಾಗಿದೆ.

ಗರ್ಭಿಣಿಯರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಸುಮಾರು 130,000 ಗರ್ಭಿಣಿಯರಿಗೆ ತುರ್ತು ಆರೋಗ್ಯ ಸೇವೆಗಳ ಅಗತ್ಯವಿದೆ ಎಂದು ವರದಿ ಹೇಳಿದೆ.

ಪ್ರವಾಹವು ಸಾವಿರಾರು ಕಿಲೋಮೀಟರ್‌ಗಳಷ್ಟು ರಸ್ತೆಗಳನ್ನು ಕೊಚ್ಚಿಕೊಂಡುಹೋಗಿದೆ. 440 ಸೇತುವೆಗಳನ್ನು ನಾಶಪಡಿಸಿದೆ. ಪ್ರವಾಹದಿಂದಾಗಿ ಹಾನಿಗೊಳಗಾದ ರೈಲು ಸಂಚಾರವನ್ನು ಪುನರ್‌ ನಿರ್ಮಿಸಲು ಸಾವಿರಾರು ಕೋಟಿ ಹಣದ ಅಗತ್ಯವಿದೆ ಎಂದು ಪಾಕಿಸ್ತಾನ ರೈಲ್ವೆ ಇಲಾಖೆ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app