ಪಾಕಿಸ್ತಾನ | ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಇಮ್ರಾನ್‌ ಖಾನ್‌

Imran Khan
  • ಲಾಹೋರ್‌ನ ಶೌಕತ್ ಖಾನಮ್ ಆಸ್ಪತ್ರೆಯಲ್ಲಿ ಇಮ್ರಾನ್‌ ಖಾನ್‌ಗೆ ಚಿಕಿತ್ಸೆ
  • ಪ್ರಚಾರ ಮೆರವಣಿಗೆ ಮುಂದುವರಿಯಲಿದೆ ಎಂದು ಪಿಟಿಐ ನಾಯಕರು

ಗುಂಡೇಟಿನಿಂದ ಗಾಯಗೊಂಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ (ನ. 4) ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹತ್ಯೆ ಯತ್ನದ ನಂತರ ಇಮ್ರಾನ್‌ ಅವರ ಕಾಲಿಗೆ ಗುಂಡೇಟು ಬಿದ್ದು ಗಾಯವಾಗಿತ್ತು.

ಸಮಾವೇಶದ ವೇಳೆ ಬಂಧೂಕುಧಾರಿಯೊಬ್ಬ ಇಮ್ರಾನ್‌ ಖಾನ್‌ ಮೇಲೆ ನಡೆಸಿದ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಏಪ್ರಿಲ್‌ನಲ್ಲಿ ಇಮ್ರಾನ್‌ ಖಾನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾಷ್ಟ್ರ ರಾಜಕಾರಣದಲ್ಲಿ ಬಿಕ್ಕಟ್ಟು ತಲೆದೋರಿದೆ. ಪ್ರಧಾನಿ ಶಹಭಾಜ್‌ ಷರೀಫ್‌ ವಿರುದ್ಧ ಇಮ್ರಾನ್‌ ಖಾನ್‌ ವಾಗ್ದಾಳಿ ನಡೆಸುತ್ತಿದ್ದಾರೆ.   

Eedina App

ಲಾಹೋರ್‌ನ ಪೂರ್ವ ನಗರದಲ್ಲಿರುವ ಶೌಕತ್ ಖಾನಮ್ ಆಸ್ಪತ್ರೆಯಲ್ಲಿ ಇಮ್ರಾನ್‌ ಖಾನ್ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಫೈಸಲ್ ಸುಲ್ತಾನ್ ಶುಕ್ರವಾರ ಬೆಳಿಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

70 ವರ್ಷದ ಇಮ್ರಾನ್‌ ಖಾನ್‌ ಅವರು ದಾಳಿಗೊಳಗಾದಾಗ ಲಾಹೋರ್‌ನಿಂದ ರಾಜಧಾನಿ ಇಸ್ಲಾಮಾಬಾದ್‌ಗೆ ಕಳೆದ ವಾರದಿಂದ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುತ್ತಿದ್ದರು.   

AV Eye Hospital ad

ಇಸ್ಲಾಮಾಬಾದ್‌ನ ಪೂರ್ವಕ್ಕೆ 170 ಕಿಲೋಮೀಟರ್ (100 ಮೈಲಿ) ದೂರದಲ್ಲಿರುವ ವಜೀರಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಸಮಾವೇಶದಲ್ಲಿ ಮಾತನಾಡಲು ಕಂಟೇನರ್‌ ಟ್ರಕ್‌ ಮೇಲೆ ಹತ್ತಿ ನಿಂತ ಕೆಲವು ನಿಮಿಷಗಳಲ್ಲಿ ಗುಂಡು ಹಾರಿಸಲಾಗಿದೆ. ಇದರಿಂದ ಇಮ್ರಾನ್‌ ಖಾನ್ ಅವರ ಬಲಗಾಲಿಗೆ ಒಂದು ಗುಂಡು ತಾಗಿ ಗಾಯವಾಗಿದೆ.  

“ಸಮಾವೇಶದ ಮುಂದಿನ ಸಾಲಿನಲ್ಲಿ ನಿಂತಿದ್ದ ಎಲ್ಲರಿಗೂ ಗಾಯಗಳಾಗಿವೆ” ಎಂದು  ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ ಸುದ್ದಿ ಸಂಸ್ಥೆಗೆ ತಿಳಿಸಿದರು.

“ಇದು ಇಮ್ರಾನ್‌ ಖಾನ್‌ ಅವರನ್ನು ಕೊಲ್ಲುವ ಸಂಚು” ಎಂದು ಇಮ್ರಾನ್ ಖಾನ್ ಅವರ ಹಿರಿಯ ಸಹಾಯಕ ರವೂಫ್ ಹಸನ್ ಆರೋಪಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಇಮ್ರಾನ್‌ ಖಾನ್‌ರನ್ನು ಕೊಲ್ಲಲೆಂದೇ ಗುಂಡು ಹಾರಿಸಿದ್ದೆ : ಪಾಕ್‌ನಲ್ಲಿ ಬಂಧಿತ ಯುವಕನಿಂದ ಬಹಿರಂಗ ಹೇಳಿಕೆ

ಇಮ್ರಾನ್‌ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್- ಇ- ಇನ್ಸಾಫ್ (ಪಿಟಿಐ) ಪಕ್ಷದ ಹಲವಾರು ನಾಯಕರು ಹತ್ಯೆಯ ಪ್ರಯತ್ನಕ್ಕೆ ಸರ್ಕಾರವನ್ನು ದೂಷಿಸಿದ್ದಾರೆ. ಆದರೆ ಅಧಿಕಾರಿಗಳು ಅದನ್ನು ತಳ್ಳಿ ಹಾಕಿದ್ದಾರೆ.

ಇಮ್ರಾನ್‌ ಖಾನ್ ಅವರ ಪ್ರಚಾರ ಮೆರವಣಿಗೆಯ ಮುಂದಿನ ರೂಪು- ರೇಷೆಯನ್ನು ಚರ್ಚಿಸಲು ಪಿಟಿಐ ನಾಯಕರು ಶುಕ್ರವಾರದ ನಂತರ ಭೇಟಿಯಾಗಲಿದ್ದಾರೆ ಎಂದು ಚೌಧರಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app