ರಷ್ಯಾ- ಉಕ್ರೇನ್‌ ಯುದ್ಧ | ಸೇನಾ ಜಮಾವಣೆ ಪ್ರಮಾಣ ಏರಿಸಿದ ರಷ್ಯಾ

  • ಭಾಗಶಃ ಸೇನೆ ಜಮಾವಣೆಯ ಆದೇಶಕ್ಕೆ ಸಹಿ ಹಾಕಿದ ವ್ಲಾದಿಮಿರ್ ಪುಟಿನ್
  • ನಾಗರಿಕರ ರಕ್ಷಣೆಗೆ ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುವ ಭರವಸೆ

ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಯುದ್ಧ ಸನ್ನದ್ಧ ರೀತಿಯಲ್ಲಿ ಜಮಾವಣೆಗೆ ಅಧ್ಯಕ್ಷ ಪುಟಿನ್ ಬುಧವಾರ ಆದೇಶ ನೀಡಿದ್ದಾರೆ. ಪಾಶ್ಚಾತ್ಯ ದೇಶಗಳು 'ಪರಮಾಣು ಬ್ಲ್ಯಾಕ್‌ಮೇಲ್' ಎಂದು ಕರೆಯುವುದನ್ನು ಮುಂದುವರಿಸಿದರೆ ರಷ್ಯಾ ತನ್ನ ಎಲ್ಲಾ ಅಸ್ತ್ರಗಳಿಂದ ಶಕ್ತಿಯನ್ನು ಪ್ರತಿಕ್ರಿಯಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ನಮ್ಮ ನಾಗರಿಕರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಪುಟಿನ್ ಅವರು ಭಾಗಶಃ ಸೇನೆ ಜಮಾವಣೆಯ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ಯುದ್ಧದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಪೂರ್ವ ಉಕ್ರೇನ್‌ನ ಡಾನ್‌ಬಾಸ್‌ ಪ್ರದೇಶವನ್ನು "ವಿಮೋಚನೆಗೊಳಿಸುವುದು" ತನ್ನ ಗುರಿ ಎಂದು ರಷ್ಯಾ ಹೇಳಿದೆ. ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಇಂತಹ ಮೊದಲ ಆದೇಶ ಇದಾಗಿದೆ. 

ಈ ಸುದ್ದಿ ಓದಿದ್ದೀರಾ? ಲೆಬನಾನ್‌ ಆರ್ಥಿಕ ಕುಸಿತ | ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದ ಠೇವಣಿದಾರರು

ಆದೇಶದ ವಿಚಾರವಾಗಿ ಮಾತನಾಡಿರುವ ಪುಟಿನ್, "ಪಶ್ಚಿಮ ದೇಶಗಳು ಲಕ್ಷ್ಮಣ ರೇಖೆಯನ್ನು ದಾಟಿದ್ದು, ರಷ್ಯಾವನ್ನು ದುರ್ಬಲಗೊಳಿಸಲು, ವಿಭಜಿಸಲು ಮತ್ತು ನಾಶಮಾಡಲು ಕರೆ ನೀಡುತ್ತಿವೆ. ರಷ್ಯಾದೊಂದಿಗೆ ಪ್ರಾಕ್ಸಿ (ಪರೋಕ್ಷ) ಯುದ್ಧವನ್ನು ಪ್ರಾರಂಭಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹುನ್ನಾರ ನಡೆಸಿವೆ. ನಮ್ಮ  ದೇಶದಲ್ಲಿರುವ ನಾಗರಿಕರನ್ನು ರಕ್ಷಿಸುವುದು ನಮ್ಮ ಗುರಿ" ಎಂದು ಪುಟಿನ್‌ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ‘ಪರಮಾಣು ಬ್ಲ್ಯಾಕ್‌ಮೇಲ್’ ಮುಂದುವರಿಸಿದರೆ ರಷ್ಯಾ ತನ್ನ ಎಲ್ಲ ವಿಶಾಲವಾದ ಶಸ್ತ್ರಾಗಾರದ ಶಕ್ತಿಯೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಪುಟಿನ್ ಅವರು ಎಚ್ಚರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್