ಅಮೆರಿಕ- ನ್ಯಾಟೋ ವಿಸ್ತರಣೆ ಧೋರಣೆಯಿಂದ ಉಕ್ರೇನ್ ಬಿಕ್ಕಟ್ಟು: ಚೀನಾ

  • ಇಂದಿನ ಉಕ್ರೇನ್‌ ಬಿಕ್ಕಟ್ಟಿಗೆ ಅಮೆರಿಕ, ನ್ಯಾಟೋ ಕಾರಣ
  • ರಷ್ಯಾದೊಂದಿಗೆ ಪಾಲುದಾರಿಕೆ ಮುಂದುವರಿಯಲಿದೆ

ಉಕ್ರೇನ್‌ನಲ್ಲಿ ಯುದ್ಧ ನಡೆಯುವಂತೆ ಅಮೆರಿಕ ಪ್ರಚೋದನೆ ನೀಡುತ್ತಿದೆ ಎಂದು ಚೀನಾ ಆರೋಪಿಸಿದೆ.  ಸೋವಿಯತ್ ಒಕ್ಕೂಟ ಪತನವಾದ ನಂತರ ನ್ಯಾಟೋವನ್ನು ವಿಸರ್ಜಿಸಬೇಕಿತ್ತು ಎಂದೂ ಹೇಳಿದೆ.

ಇಂದಿನ ಉಕ್ರೇನ್‌ ಬಿಕ್ಕಟ್ಟಿಗೆ 1990ರ ದಶಕದಿಂದ ಅಮೆರಿಕ ಮತ್ತು ನ್ಯಾಟೋ ಪ್ರದರ್ಶಿಸುತ್ತಾ ಬಂದಿರುವ ವ್ಯಾಪ್ತಿ ವಿಸ್ತರಣಾ ಧೋರಣೆ ಕಾರಣ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಶುಕ್ರವಾರ ಬ್ರೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

''ನ್ಯಾಟೋ ಸದಸ್ಯರ ಸಂಖ್ಯೆಯು 16ರಿಂದ 30ಕ್ಕೆ ಏರಿಕೆಯಾಗಿದೆ. ವ್ಯಾಪ್ತಿಯನ್ನು ಪೂರ್ವಾಭಿಮುಖವಾಗಿ ಸಾವಿರ ಕಿಲೋಮೀಟರ್‌ಗಳಷ್ಟು ಹೆಚ್ಚಿಸಿದೆ. ಅದು ಹಂತ- ಹಂತವಾಗಿ ರಷ್ಯಾವನ್ನು  ಅಂಚಿಗೆ ತಳ್ಳಿದೆ" ಎಂದು ಝಾವೊ ಹೇಳಿದ್ದಾರೆ. ಈ ಯುದ್ಧದಲ್ಲಿ ನಾವು ಯಾವ ದೇಶದ ಪರವೂ ನಿಲ್ಲುವುದಿಲ್ಲ. ರಷ್ಯಾದೊಂದಿಗೆ ನಮ್ಮ ಪಾಲುದಾರಿಕೆ ಮುಂದುವರಿಸುತ್ತೇವೆ" ಎಂದು ಚೀನಾ ಹೇಳಿದೆ.

ಅಲ್ಲದೆ, ರಷ್ಯಾ ಮೇಲೆ ಹೇರಲಾದ ನಿಷೇಧಗಳನ್ನು ಚೀನಾ ವಿರೋಧಿಸಿದೆ. ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಉಕ್ರೇನ್‌ ಕುರಿತಾಗಿ ಚರ್ಚೆ ನಡೆಸಬೇಕಾಗಿರುವ ವರ್ಚುವಲ್ ಶೃಂಗಸಮ್ಮೇಳನಕ್ಕೆ ಮೊದಲು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app