ರಷ್ಯಾ- ಉಕ್ರೇನ್‌ ಯುದ್ಧ | ಸೇನೆ ಸಜ್ಜುಗೊಳಿಸುವ ಆದೇಶದ ಬೆನ್ನಲ್ಲೇ ರಷ್ಯಾ ತೊರೆದ ಮೂರು ಲಕ್ಷ ಮಂದಿ!

  • ಸೇನೆ ಸಜ್ಜುಗೊಳಿಸಲು ಆದೇಶಿಸಿದ ರಷ್ಯಾ ಅಧ್ಯಕ್ಷ ಪುಟಿನ್‌
  • ರಷ್ಯಾ ತೊರೆದು ವಿಮಾನವೇರಿದ ಮೂರು ಲಕ್ಷ ಮಂದಿ

ಉಕ್ರೇನ್‌ ಗಡಿಯಲ್ಲಿ ಸೇನೆ ಜಮಾವಣೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಷ್ಯಾದಲ್ಲಿರುವ ಮಾಜಿ ಸೈನಿಕರು, ವಿದ್ಯಾರ್ಥಿಗಳು ಹಾಗೂ ಸುಮಾರು 3 ಲಕ್ಷ ಮಂದಿ ದೇಶ ತೊರೆದು ವಿಮಾನಗಳ ಮೂಲಕ ಪಲಾಯನ ಮಾಡಿದ್ದಾರೆ. ಇನ್ನೂ ಹಲವರು ಪಲಾಯನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಮುಂಜಾನೆ ದೂರದರ್ಶನದಲ್ಲಿ ನಾವು ಯಾವುದಕ್ಕೂ ಹೆದರುವುದಿಲ್ಲ. ನಮ್ಮ ದೇಶದ ನಾಗರಿಕರನ್ನು ಕಾಪಾಡುವುದು ನಮ್ಮ ಗುರಿ. ಪೂರ್ಣ ಪ್ರಮಾಣದ ಸೇನೆಯನ್ನು ಡಾನ್‌ಬಾಸ್‌ ಪ್ರದೇಶದಲ್ಲಿ ಜಮಾವಣೆ ಮಾಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು.

ಇದಾದ ಬಳಿಕ ರಷ್ಯಾದಿಂದ ಹೊರ ಹೋಗುವ ವಿಮಾನಗಳ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ. ಟರ್ಕಿಯ ಇಸ್ತಾನ್‌ಬುಲ್, ಅರ್ಮೇನಿಯ ಹಾಗೂ ಯುರೆವಾನ್‌ಗೆ ವೀಸಾ ಇಲ್ಲದೇ ರಷ್ಯನ್ನರು ಪ್ರವೇಶ ಮಾಡಬಹುದಾಗಿದೆ. ಕೆಲವರು ದುಬೈಗೆ ಪ್ರಯಾಣ ಮಾಡಲು ಟಿಕೆಟ್‌ ಖರೀದಿಸಿದ್ದಾರೆ ಎಂದು ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ? ವಿಶ್ವಸಂಸ್ಥೆ ಸಾಮಾನ್ಯ ಸಭೆ | ಕಾಶ್ಮೀರ ವಿಷಯ ಪ್ರಸ್ತಾಪಿದ ಟರ್ಕಿ ಅಧ್ಯಕ್ಷ ಎರ್ಡೋಗನ್

ವ್ಲಾದಿಮಿರ್ ಪುಟಿನ್ ಅವರ ರಷ್ಯಾ ಸೈನ್ಯವನ್ನು ಭಾಗಶಃ ಸಜ್ಜುಗೊಳಿಸುವ ಆದೇಶದ ನಂತರ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಲು 3 ಲಕ್ಷ ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆಯಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಬುಧವಾರ ಮುಂಜಾನೆ ಹೇಳಿದ್ದರು.

ರಷ್ಯಾದ ಈ ನಡೆಯನ್ನು ಮೊದಲೇ ಊಹೆ ಮಾಡಿದ್ದೆವು. ಪುಟಿನ್ ಯುದ್ಧ ಪ್ರಯತ್ನಗಳು ವಿಫಲವಾಗುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಉಕ್ರೇನ್‌ ಹೇಳಿದೆ.

ಡಾಲರ್‌ ಎದುರು ಕುಸಿದ ರಷ್ಯಾದ ರೂಬಲ್‌

ಉಕ್ರೇನ್‌ ಗಡಿಯಲ್ಲಿ ಪೂರ್ಣಪ್ರಮಾಣದ ಸೇನೆ ಸಜ್ಜಗೊಳಿಸಲು ಪುಟಿನ್ ಆದೇಶಿಸಿದ ನಂತರ ರಷ್ಯಾದ ಕರೆನ್ಸಿ‌ ರೂಬಲ್‌ ಅಮೆರಿಕ ಡಾಲರ್‌ ಎದುರು ದಿಢೀರ್ ಕುಸಿದಿದೆ. ‌

ಸುಮಾರು ಎರಡು ತಿಂಗಳ ನಂತರ ಮೊದಲ ಬಾರಿಗೆ ರಷ್ಯಾದ ರೂಬಲ್ ಕುಸಿದಿದ್ದು, ಈ ಮೊದಲು ಅಮೆರಿಕದ ಒಂದು ಡಾಲರ್‌ಗೆ 61.97 ರೂಬಲ್‌ ಆಗಿತ್ತು. ಪ್ರಸ್ತುತ ಆ ಮೌಲ್ಯವು ಶೇ.1.5ರಷ್ಟು ಕುಸಿದಿದೆ. ಈಗ ಒಂದು ಡಾಲರ್‌ಗೆ 62.97 ರೂಬಲ್‌ ಆಗಿದೆ.

ಈ ನಡುವೆ, "ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ನಮ್ಮ ನಾಗರಿಕರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್