ರಷ್ಯಾ-ಉಕ್ರೇನ್‌ ಯುದ್ಧ | ರಷ್ಯಾ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ: ಜೋ ಬೈಡನ್‌

  • ರಷ್ಯಾ ಆಕ್ರಮಣಕಾರಿ ನಡೆಯನ್ನು ಅನುಸರಿಸಿದೆ
  • ನಾಚಿಕೆಯಿಲ್ಲದೇ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ

ರಷ್ಯಾ-ಉಕ್ರೇನ್‌ ಯುದ್ಧದ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ಉಕ್ರೇನ್‌ನಲ್ಲಿ ನಾಚಿಕೆಯಿಲ್ಲದೇ ವಿಶ್ವಸಂಸ್ಥೆಯ ನಿಯಮ ಉಲ್ಲಂಘನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಷ್ಯಾ ಆಕ್ರಮಣಕಾರಿ ನಡೆಯನ್ನು ಅನುಸರಿಸಿದೆ. ಉಕ್ರೇನ್‌ ಮೇಲೆ ಇನ್ನೂ ದಾಳಿ ಹೆಚ್ಚಾಗುವ ಸಾಧ್ಯತೆಯಿದೆ. ಉಕ್ರೇನ್‌ಗೆ  ಜಾಗತಿಕ ಬೆಂಬಲ ಅಗತ್ಯವಿದೆ ಎಂದು ಜೋ ಬೈಡನ್‌ ಹೇಳಿದ್ದಾರೆ.

ಏಳು ತಿಂಗಳಿಂದ ರಷ್ಯಾದ ಅತಿಕ್ರಮಣವನ್ನು ಖಂಡಿಸಿರುವ ಬೈಡೆನ್, ಉಕ್ರೇನ್‌ನಲ್ಲಿ ಒಂದು ತಲೆಮಾರಿನ ಸಂಸ್ಕೃತಿಯನ್ನು  ನಾಶಮಾಡಿದೆ. ನಾಗರಿಕರ ಮೇಲೆ ದೌರ್ಜನ್ಯ ಮಾಡುತ್ತಿದೆ. ಇದನ್ನು ನೋಡಿದರೆ ಗಾಬರಿಯಾಗುತ್ತದೆ ಎಂದು ಜೋ ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಟಿನ್ ಅವರ ಇತ್ತೀಚಿನ ಹೇಳಿಕೆಗಳ  ಕುರಿತಾಗಿ ಮಾತನಾಡಿರುವ ಬೈಡನ್, ಪುಟಿನ್ ಯುರೋಪ್‌ಗೆ ಹೊಸದಾಗಿ ಅಣು ಬೆದರಿಕೆ ಹಾಕಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ಮಾಡದಿರುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರದ ನಾಯಕರಾಗಿ, ಪುಟಿನ್ ಅವರ ಈ ರೀತಿಯ ಹೇಳಿಕೆಗಳು ರಷ್ಯಾಗೆ ತನ್ನ ಜವಾಬ್ದಾರಿಯೆಡೆಗೆ ಅಜಾಗರೂಕ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಸಿವಿನಿಂದ ತತ್ತರಿಸಿದ ವಿಶ್ವ | ಜಾಗತಿಕವಾಗಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವು

ಇನ್ನು ಉಕ್ರೇನ್ ನಲ್ಲಿ ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದಿರುವ ಪ್ರಾಂತ್ಯದಲ್ಲಿ ಈ ವಾರದಲ್ಲಿ "ಜನಾಭಿಪ್ರಾಯ"ವನ್ನು ನಿಗದಿಪಡಿಸಿರುವ ರಷ್ಯಾದ ನಡೆಯನ್ನೂ ಬೈಡನ್ ಟೀಕಿಸಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಯುದ್ಧ ಸನ್ನದ್ಧ ರೀತಿಯಲ್ಲಿ ಜಮಾವಣೆಗೆ ಅಧ್ಯಕ್ಷ ಪುಟಿನ್ ಬುಧವಾರ ಆದೇಶ ನೀಡಿದ್ದಾರೆ. ಪಾಶ್ಚಾತ್ಯ ದೇಶಗಳು 'ಪರಮಾಣು ಬ್ಲ್ಯಾಕ್‌ಮೇಲ್' ಎಂದು ಕರೆಯುವುದನ್ನು ಮುಂದುವರಿಸಿದರೆ ರಷ್ಯಾ ತನ್ನ ಎಲ್ಲ ಅಸ್ತ್ರಗಳಿಂದ ಶಕ್ತಿಯನ್ನು ಪ್ರತಿಕ್ರಿಯಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ನಮ್ಮ ನಾಗರಿಕರನ್ನು ರಕ್ಷಿಸಲು ಲಭ್ಯವಿರುವ ಎಲ್ಲ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 
ಪುಟಿನ್ ಅವರು ಭಾಗಶಃ ಸೇನೆ ಜಮಾವಣೆಯ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಇದರಿಂದಾಗಿ ಯುದ್ಧದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಪೂರ್ವ ಉಕ್ರೇನ್‌ನ ಡಾನ್‌ಬಾಸ್‌ ಪ್ರದೇಶವನ್ನು "ವಿಮೋಚನೆಗೊಳಿಸುವುದು" ತನ್ನ ಗುರಿ ಎಂದು ರಷ್ಯಾ ಹೇಳಿದೆ. ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಇಂತಹ ಮೊದಲ ಆದೇಶ ಇದಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್