ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು | ಪ್ರತಿಭಟನೆಯಲ್ಲಿ ಭಾಗಿಯಾದ ಕ್ರಿಕೆಟಿಗ ಸನತ್ ಜಯಸೂರ್ಯ

  • ಶ್ರೀಲಂಕಾದ ಜನರ ಜೊತೆಗೆ ನಿಲ್ಲುತ್ತೇನೆ
  • ಮುತ್ತಿಗೆ ಮುಗಿದಿದೆ, ಭದ್ರಕೋಟೆ ಮುರಿದಿದೆ

ಕೊಲಂಬೋದಲ್ಲಿ ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆ ಕೋರಿ ಅವರ ಅಧಿಕೃತ ನಿವಾಸದೆದುರು ನಡೆಸಿದ ಪ್ರತಿಭಟನೆಯಲ್ಲಿ ದೇಶದ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸನತ್ ಜಯಸೂರ್ಯ ಕೂಡ ಭಾಗಿಯಾಗಿದ್ದಾರೆ. "ನಾನು ಸದಾ ಶ್ರೀಲಂಕಾದ ಜನರೊಂದಿಗೆ ನಿಲ್ಲುತ್ತೇನೆ. ಶೀಘ್ರ ವಿಜಯ ಆಚರಿಸಲಿದ್ದೇವೆ. ಆದರೆ ಯಾವುದೇ ಉಲ್ಲಂಘನೆಗಳಿಲ್ಲದೆ ನಡೆಯಬೇಕು" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ಮುತ್ತಿಗೆ ಮುಗಿದಿದೆ. ನಿಮ್ಮ ಭದ್ರಕೋಟೆ ಮುರಿದಿದೆ. ಅರಗಾಲಯ ಮತ್ತು ಜನರ ಅಧಿಕಾರ ಗೆದ್ದಿದೆ. ರಾಜೀನಾಮೆ ನೀಡುವ ಘನತೆಯಿರಲಿ" ಎಂದು ಇನ್ನೊಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. "ನನ್ನ ಇಡೀ ಜೀವಮಾನದಲ್ಲಿ ದೇಶ ಈ ರೀತಿ ಒಗ್ಗಟ್ಟಿನಲ್ಲಿರುವುದನ್ನು ನೋಡಿಲ್ಲ. ಈಗ ವಿಫಲ ನಾಯಕನನ್ನು ಕೆಳಗಿಳಿಸಲು ಜನರು ಒಂದಾಗಿದ್ದಾರೆ. ಬರಹ ನಿಮ್ಮ ಅಧಿಕೃತ ಮನೆಯ ಗೋಡೆಯಲ್ಲಿದೆ. ದಯವಿಟ್ಟು ಶಾಂತಿಯಿಂದ ಹೋಗಿ" ಎಂದು ಅವರು ಬರೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್