ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು | ದೇಶ ತೀವ್ರ ಆಹಾರ ಸಮಸ್ಯೆಯಿಂದ ಬಳಲುತ್ತಿದೆ ಎಂದ ವಿಶ್ವಸಂಸ್ಥೆ

Sri Lanka Economic Crisis
  • 1.7 ದಶಲಕ್ಷ ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ
  • ಶ್ರೀಲಂಕಾದಲ್ಲಿ ಲಕ್ಷಾಂತರ ಮಂದಿ ಬಡತನದ ರೇಖೆಗಿಂತ ಕೆಳಗಿದ್ದಾರೆ

ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾದಲ್ಲಿ ಆಹಾರದ ಸಮಸ್ಯೆ ಮತ್ತಷ್ಟು ಹೆಚ್ಚಬಹುದು. ತುರ್ತು ಮಾನವೀಯ ನೆರವಿನ ಅಗತ್ಯವಿರುವ ಜನರ ಸಂಖ್ಯೆ ದುಪ್ಪಟ್ಟಾಗಿದ್ದು, 3.4 ದಶಲಕ್ಷಕ್ಕೆ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

22 ದಶಲಕ್ಷ ಜನಸಂಖ್ಯೆ ಇರುವ ದ್ವೀಪರಾಷ್ಟ್ರದಲ್ಲಿ 1.7 ದಶಲಕ್ಷ ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ಜೂನ್‌ನಲ್ಲಿ ವಿಶ್ವಸಂಸ್ಥೆ ಅಂದಾಜಿಸಿತ್ತು. ಅಗತ್ಯವಿರುವ ಜನರಿಗೆ ಆಹಾರ ಒದಗಿಸಲು 79 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸಲಾಗಿದೆ. ಆದರೆ ಬಡಜನರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿ 70 ದಶಲಕ್ಷ ಡಾಲರ್ ಮೊತ್ತದ ಅಗತ್ಯವಿದೆ. ಎರಡು ಅವಧಿಯಲ್ಲಿ ಕಳಪೆ ಫಸಲು, ವಿದೇಶಿ ವಿನಿಮಯ ಕೊರತೆ, ಕುಟುಂಬದ ಖರೀದಿ ಶಕ್ತಿ ಕುಂಠಿತವಾಗಿರುವುದು ಶ್ರೀಲಂಕಾದಲ್ಲಿ ಆಹಾರದ ಅಭದ್ರತೆ ಹೆಚ್ಚಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

Eedina App

ಈ ಸುದ್ದಿ ಓದಿದ್ದೀರಾ? ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು | ಚೀನಾದಿಂದ ಪಡೆದ ಭಾರೀ ಸಾಲ ತೀರಿಸಲಾಗದೆ ಭಾರತದಿಂದ ನೆರವಿನ ಯಾಚನೆ

ಶ್ರೀಲಂಕಾದಲ್ಲಿ ಕಳೆದ ವರ್ಷ ಶೇ. 13.1ರಷ್ಟು ಇದ್ದ ಬಡತನ ದರ, ಈ ವರ್ಷ ಶೇ. 25.6ಕ್ಕೆ ಏರಿಕೆಯಾಗಿದೆ. ಗರ್ಭಿಣಿಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳ ಸಹಿತ 2.1 ದಶಲಕ್ಷ ಮಂದಿಗೆ ಆಹಾರ ಒದಗಿಸುವ ಯೋಜನೆಯನ್ನು, 1.5 ದಶಲಕ್ಷ ರೈತರಿಗೆ ಮತ್ತು ಮೀನುಗಾರರಿಗೆ ಜೀವನೋಪಾಯದ ಬೆಂಬಲವನ್ನು ಒದಗಿಸುವ ಯೋಜನೆಯನ್ನು  ಪರಿಷ್ಕರಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

AV Eye Hospital ad

ಹಸಿವಿನ ಸಮಸ್ಯೆ 

ವಿಶ್ವಬ್ಯಾಂಕ್‌ ಪ್ರಕಾರ ಶ್ರೀಲಂಕಾದಲ್ಲಿ ಲಕ್ಷಾಂತರ ಮಂದಿ ಬಡತನದ ರೇಖೆಗಿಂತ ಕೆಳಗಿದ್ದಾರೆ. ಕಳೆದ ವರ್ಷ ಹಣದುಬ್ಬರ ಶೇ. 11.1ಕ್ಕೆ ಜಿಗಿದಿತ್ತು. ಈಗ ಹಣದುಬ್ಬರ ಏಷ್ಯಾದಲ್ಲೇ ಅತೀ ದುಸ್ಥಿತಿಯಾಗಿರುವ ಶೇ. 15ಕ್ಕೇರಿ, ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲಿನ ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಮಿಲಿಟರಿ ಪಡೆಯು ಅಕ್ಕಿ, ಸಕ್ಕರೆ ಇತ್ಯಾದಿ ಅಗತ್ಯ ವಸ್ತುಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಾಟವಾಗುವಂತೆ ನೋಡಿಕೊಳ್ಳುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app