ಉಕ್ರೇನ್‌-ರಷ್ಯಾ ಯುದ್ಧ | ಮೂಲ ಸೌಕರ್ಯ ಗುರಿಯಾಗಿಸಿ ರಷ್ಯಾ ದಾಳಿ; ಕತ್ತಲಲ್ಲಿ ಮುಳುಗಿದ ಉಕ್ರೇನ್‌

Ukraine-Russia War | Russia attacks targeting infrastructure; Ukraine plunged into darkness
  • ಅಗತ್ಯ ಮೂಲ ಸೌಕರ್ಯ ಗುರಿಯಾಗಿಸಿ ರಷ್ಯಾ ದಾಳಿ
  • ರಷ್ಯಾ ದಾಳಿಯಿಂದಾಗಿ ಕತ್ತಲಿನಲ್ಲಿ ಮುಳುಗಿದ ಉಕ್ರೇನ್‌

ರಷ್ಯಾ- ಉಕ್ರೇನ್‌ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ದಾಳಿ ಮಾಡಿದೆ.

ಉಕ್ರೇನ್ ಪಡೆಗಳ ಪ್ರಬಲ ಪ್ರತಿದಾಳಿಯಿಂದಾಗಿ ಕೆರಳಿರುವ ರಷ್ಯಾ, ವಿದ್ಯುತ್ ಸ್ಥಾವರ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಿಂದ ಉಕ್ರೇನ್‌ನಾದ್ಯಂತ ವಿದ್ಯುತ್ ಕಡಿತಗೊಂಡಿದೆ. 

ರಷ್ಯಾದ ಬಾಂಬ್ ಮತ್ತು ಸೆಲ್‌ ದಾಳಿಯಿಂದಾಗಿ ಖಾರ್ಕಿವ್‌ನ ಪಶ್ಚಿಮ ಹೊರವಲಯ ವಿದ್ಯುತ್ ಕೇಂದ್ರ ಸಂಪೂರ್ಣವಾಗಿ ನಾಶಗೊಂಡಿದೆ. ಇದಲ್ಲದೇ ಮೊಲ್ಡೊವಾದ ವಿದ್ಯುತ್‌ ಕೇಂದ್ರ ಪತನವಾಗಿದ್ದು, ಉಕ್ರೇನ್‌ ರಾಜಧಾನಿ ಕೈವ್‌ ಕತ್ತಲಿನಲ್ಲಿ ಮುಳುಗಿದೆ.

ಉದ್ದೇಶಪೂರ್ವಕವಾಗಿ ರಷ್ಯಾ ನಾಗರಿಕರನ್ನು ಗುರಿಯಾಗಿಸಿ ಈ ದಾಳಿ ನಡೆಸಿದೆ. ಇದು ಭಯೋತ್ಪಾದನೆಯ ಕೃತ್ಯ, "ಮಾನವೀಯತೆಯ ವಿರುದ್ಧದ ಅಪರಾಧ" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುಡುಗಿದ್ದಾರೆ.

ಖಾರ್ಕಿವ್‌ ಜನತೆ ರಾತ್ರಿಯಿಡೀ ವಿದ್ಯುತ್ ಇಲ್ಲದೆ ಕಳೆದಿದ್ದಾರೆ. ವಿದ್ಯುತ್ ಬೆಳಕಿಲ್ಲದ ರಸ್ತೆಯಲ್ಲೇ ವಾಹನಗಳು ಸಂಚರಿಸಿವೆ ಮತ್ತು ಪಾದಾಚಾರಿಗಳು ಟಾರ್ಚ್ ಅಥವಾ ಮೊಬೈಲ್‌ ಫೋನ್‌ನ ಬೆಳಕು ಬಳಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಯುರೋಪ್‌ ದೇಶಗಳಿಗೆ ಇಂಧನ ಸರಬರಾಜು ಶೇ. 20ರಷ್ಟು ಕಡಿತಗೊಳಿಸಿದ ರಷ್ಯಾ

ಯುರೋಪ್‌ನಲ್ಲಿ ಚಳಿಗಾಲ ಆರಂಭವಾಗಿದ್ದು, "ನಾವು ಶೂನ್ಯಕ್ಕಿಂತ ಕಡಿಮೆ ತಾಪಮಾನವನ್ನು ಹೊಂದಿರುವಾಗ ವಿದ್ಯುತ್ ಪೂರೈಕೆಯಿಲ್ಲದೆ, ನೀರಿಲ್ಲದೆ ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ. “ಇದು ಮಾನವೀಯತೆಯ ವಿರುದ್ಧದ ಸ್ಪಷ್ಟ ಅಪರಾಧವಾಗಿದೆ” ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ವಿಡಿಯೋ ಮೂಲಕ ಝೆಲೆನ್ಸ್ಕಿ ಹೇಳಿದ್ದಾರೆ.

ರಾಜಧಾನಿ ಕೈವ್‌ನಲ್ಲಿ ನೀರು ಸರಬರಾಜು ಕೂಡ ಕಡಿತಗೊಂಡಿದೆ. ಬುಧವಾರ ಎರಡು ಅಂತಸ್ತಿನ ಕಟ್ಟಡಕ್ಕೆ ರಾಕೆಟ್ ಅಪ್ಪಳಿಸಿದ್ದು ಕನಿಷ್ಠ ಆರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಉಕ್ರೇನ್‌ನ ಅಗತ್ಯ ಸೇವೆಗಳನ್ನು ದುರ್ಬಲಗೊಳಿಸಲು ಮಾಸ್ಕೋ ಈ ದಾಳಿ ಮಾಡಿದೆ. 

ರಷ್ಯಾದ ಸೇನೆ ಇಂಧನ ಮತ್ತು ಮೂಲಸೌಕರ್ಯವನ್ನು ಹಾನಿಗೊಳಿಸಿದ ನಂತರ ಮತ್ತು ಉಕ್ರೇನ್‌ನಾದ್ಯಂತ ನಗರಗಳಲ್ಲಿ ವಿದ್ಯುತ್ ಕಡಿತವನ್ನು ಎದುರಿಸಿದ್ದು, ಬುಧವಾರ ಉಕ್ರೇನ್‌ ರಾಜಧಾನಿಯಲ್ಲಿ ನೀರಿನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೈವ್‌ ಮೇಯರ್ ಹೇಳಿದ್ದಾರೆ.
"ಶೆಲ್ ದಾಳಿಯಿಂದಾಗಿ, ಕೈವ್‌ನಾದ್ಯಂತ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ" ಎಂದು ವಿಟಾಲಿ ಕ್ಲಿಟ್ಸ್ಕೊ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.  

"ರಷ್ಯಾದ ಭಯೋತ್ಪಾದಕರು ಭಯೋತ್ಪಾದಕರಾಗಿಯೇ ಉಳಿಯುತ್ತಾರೆ. ಮೂಲಸೌಕರ್ಯದ ಮೇಲೆ ದಾಳಿ ಮಾಡುವುದೇ ಭಯೋತ್ಪಾದಕರ ಲಕ್ಷಣ. ಇದು ಮಿಲಿಟರಿ ನೆಲೆಯಲ್ಲ, ರಷ್ಯಾದ ಉದ್ದೇಶ ಜನರನ್ನು ಕಗ್ಗತ್ತಲಲ್ಲಿ ಮುಳುಗಿಸುವುದಾಗಿದೆ. ನೀವು ನಮ್ಮನ್ನು ಬೆದರಿಸಬಹುದು, ಶರಣಾಗುವಂತೆ ಮಾಡಬಹುದು. ನಮಗೆ ಶೀತ, ಹಸಿವು, ಕತ್ತಲೆ ಹಾಗೂ ಬಾಯಾರಿಕೆ ನಿಮ್ಮ ಸ್ನೇಹ ಮತ್ತು ಸಹೋದರತ್ವದಷ್ಟು ಮಾರಕ ಮತ್ತು ಭಯಾನಕವಲ್ಲ. ಆದರೆ ಇತಿಹಾಸವು ಎಲ್ಲವನ್ನೂ ಸೂಕ್ತ ಜಾಗದಲ್ಲಿ ಇರಿಸುತ್ತದೆ. ನಾವು ಗ್ಯಾಸ್, ಬೆಳಕು, ನೀರು ಹಾಗೂ ಆಹಾರ ಇಲ್ಲದೇ ಇರುತ್ತೇವೆ" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180