ಥಾಯ್ಲೆಂಡ್‌ನಲ್ಲಿ ಹಿಂಸಾಚಾರ | ಅಂಗಡಿಗಳ ಮೇಲೆ ಬಾಂಬ್‌ ದಾಳಿ

  • ಬೆಂಕಿಗೆ ಅಹುತಿಯಾದ ಹಲವು ಅಂಗಡಿಗಳು
  • ಬೌದ್ಧ ಧರ್ಮ ಪ್ರಾಬಲ್ಯ ಇರುವ ಥೈಲ್ಯಾಂಡ್‌

ಪ್ರತ್ಯೇಕತಾವಾದಿ ಮುಸ್ಲಿಂ ಗುಂಪುಗಳು ಥೈಲ್ಯಾಂಡ್‌ನ ದಕ್ಷಿಣ ಪ್ರಾಂತ್ಯದಲ್ಲಿ, ಮಂಗಳವಾರ ಅಂಗಡಿಗಳ ಮೇಲೆ ಬಾಂಬ್‌ ದಾಳಿ ನಡೆಸುವ ಮೂಲಕ ಹಿಂಸಾಚಾರ ಸೃಷ್ಟಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಕನಿಷ್ಠ 17 ದಾಳಿಗಳು ಸಂಭವಿಸಿದ್ದು, ಪಟ್ಟಾನಿ, ನಾರಾಥಿವಾಟ್ ಹಾಗೂ ಯಲಾ ಪ್ರಾಂತ್ಯಗಳಲ್ಲಿ ಹಿಂಸಾಚಾರ ಸಂಭವಿಸಿವೆ ಎಂದು ಮಿಲಿಟರಿ ವಕ್ತಾರ ಪ್ರಮೋಟೆ ಪ್ರೋಮಿನ್ ಹೇಳಿದ್ದಾರೆ. ಈ ದಾಳಿಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ ದಾಳಿಕೋರರು "ಮಹಿಳೆಯರಂತೆ ವೇಷ ಧರಿಸಿ ಮೋಟರ್‌ ಸೈಕಲ್‌ಗಳ ಮೂಲಕ ಬಂದ ಬಂಡುಕೋರರು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿ ಅಂಗಡಿಗಳ ಮೇಲೆ ಎಸೆದಿದ್ದಾರೆ" ಎಂದು ಮಿಲಿಟರಿ ವಕ್ತಾರ ಪ್ರಮೋಟ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಮೆರಿಕ-ರಷ್ಯಾ ಪರಮಾಣು ಯುದ್ಧವಾದರೆ 5 ಶತಕೋಟಿ ಮಂದಿ ಸಾವು: ವರದಿ

ಯಾಲಾದ ಯಹಾ ಜಿಲ್ಲೆಯ ಅಂಗಡಿಯೊಂದಕ್ಕೆ ನುಗ್ಗಿದ ಬಂಡುಕೋರರು ಕಪ್ಪು ಚೀಲವನ್ನು ಒಳಗೆ ಇರಿಸಿ ನೀವು ಬದುಕಲು ಭಯಸಿದರೆ ಹೊರ ಹೋಗುವಂತೆ ಎಚ್ಚರಿಸಿದ್ದಾರೆ. 10 ನಿಮಿಷದ ನಂತರ ಸ್ಫೋಟ ಉಂಟಾಗಿದ್ದು, ಹಲವು ಅಂಗಡಿಗಳು ಬೆಂಕಿಗೆ ಅಹುತಿಯಾಗಿದೆ ಎಂದು ಎಂದು ಪೊಲೀಸ್ ಕ್ಯಾಪ್ಟನ್ ಸರಯುತ್ ಕೊಟ್ಚಾವೊಂಗ್ ತಿಳಿಸಿದ್ದಾರೆ.

ದೇಶದ ಆರ್ಥಿಕತೆಯನ್ನು ನಾಶ ಮಾಡಲು ಬಂಡುಕೋರರು ಯೋಜನೆ ರೂಪಿಸಿದ್ದಾರೆ. ನಾಗರಿಕರ ಮೇಲೆ ಹಿಂಸಾಚಾರ ಮಾಡುವ ಮೂಲಕ ಆಡಳಿತ ಯಂತ್ರವನ್ನು ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಪ್ರಮೋಟ್ ಹೇಳಿದ್ದರು.

ಬೌದ್ಧ ಧರ್ಮ ಪ್ರಾಬಲ್ಯ ಇರುವ ಥೈಲ್ಯಾಂಡ್‌ನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಆದರೆ ತಮ್ಮನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಲಾಗಿದೆ ಎಂದು ಮುಸ್ಲಿಂ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಮುಸ್ಲಿಂ ಮತ್ತು ಬೌದ್ಧರ ನಡುವೆ ದಂಗೆ ಆರಂಭವಾಗಿತ್ತು. ಇಲ್ಲಿಯವರೆಗೂ ಸುಮಾರು 7,300 ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್