ರಾಜಿಯ ಹಾದಿಯಲ್ಲಿ ಸಾಗುತ್ತಿರುವ ಬದ್ಧ ವೈರಿಗಳಾದ ಟರ್ಕಿ- ಸೌದಿ ಅರೇಬಿಯ

  • ಟರ್ಕಿ ಕಳೆದ ಎರಡು ದಶಕಗಳಿಂದ ಕಠಿಣ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ
  • ಜಾಗತಿಕವಾಗಿ ಹಲವು ವರ್ಷಗಳಿಂದ ಮುಸ್ಲಿಂ ದೇಶಗಳನ್ನು ಹತ್ತಿಕ್ಕಿರುವ ಸಮಾನ ಆತಂಕ

ಸೌದಿ ಅರೇಬಿಯದೊಂದಿಗೆ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಸೌದಿ ದೊರೆ ಸಲ್ಮಾನ್‍ ಅವರನ್ನು ಭೇಟಿಯಾಗಿ  ಚರ್ಚಿಸಿದ್ದಾರೆ. ಸೌದಿ ಅರೇಬಿಯದ ಹಿರಿಯ ಪತ್ರಕರ್ತ ಜಮಾಲ್ ಕಶೋಗಿ ಕೊಲೆಯ ಬಳಿಕ ಟರ್ಕಿ ಮತ್ತು ಸೌದಿಯ ನಡುವೆ ಮತ್ತೊಮ್ಮೆ ರಾಜತ್ರಾಂತ್ರಿಕ ಸಂಬಂಧ ಏರ್ಪಟ್ಟಿದೆ. 2018ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್ ಕಶೋಗಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಸೌದಿ ರಾಯಬಾರಿ ಕಚೇರಿಯಲ್ಲಿ ಕೊಲೆಯಾದ ಬಳಿಕ ಎರಡು ದೇಶಗಳ ನಡುವಿನ ಸಂಬಂಧ  ಹದಗೆಟ್ಟಿತ್ತು. 

ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಸೌದಿ ಅರೇಬಿಯಗೆ ಬೇಟಿ ನೀಡಿದ್ದಾರೆ. ಎರಡು ಸುನ್ನಿ ಮುಸ್ಲಿಂ ರಾಷ್ಟ್ರಗಳ ರಾಜಿ ಸಂಧಾನಕ್ಕೆ ಕಾರಣವೇನು?

Eedina App

ಟರ್ಕಿಯ ವಿದೇಶಾಂಗ ನೀತಿಯಲ್ಲಾದ ಬದಲಾವಣೆ
ಟರ್ಕಿಯಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈಗಿನ ಅರ್ಥಿಕತೆಯ ಅಂಕಿ-ಅಂಶ ಗಮನಿದರೆ ಪ್ರಸುತ್ತ ಶೇ. 61 ಹಣದುಬ್ಬರವಿದ್ದು, ಪ್ರತಿವರ್ಷ ಡಾಲರ್‌ ವಿರುದ್ಧ ಟರ್ಕಿಯ ಕರೆನ್ಸಿ ಶೇ. 44ರಷ್ಟು ಕುಸಿಯುತ್ತಿದೆ. ಮುಂದಿನ ಚುನಾವಣೆಗೆ ಇದು ಮಳುವಾಗುವ ಸಾಧ್ಯತೆಯಿದೆ.

ಟರ್ಕಿ ಕಳೆದ ಎರಡು ದಶಕಗಳಿಂದ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಶ್ರೀಮಂತ ಗಲ್ಫ್ ಅರಬ್ ರಾಷ್ಟ್ರಗಳೊಂದಿಗೆ ಸಂಬಂಧ ಬೆಳಸಿ ಹೊಡಿಕೆ ಮಾಡಲು ಸೆಳೆಯುವುದು ಟರ್ಕಿಯ ಮೊದಲ ಗುರಿಯಾಗಿದೆ. ಈಗಾಗಲೇ ಟರ್ಕಿಯ ಆರ್ಥಿಕತೆ ಬೆಂಬಲಿಸಲು ಸೌದಿ ಅರೇಬಿಯಾ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ಘೋಷಿಸಿದೆ.  
 
ಸೌದಿ ಅರೇಬಿಯದಿಂದ ತನ್ನ ವಿದೇಶಿ ವಿನಿಮಯ ದರ ಸುಧಾರಿಸಿ ಆರ್ಥಿಕತೆ ಸುಧಾರಿಸುವ ನಿರೀಕ್ಷೆಯಲ್ಲಿ ಟರ್ಕಿ ಮಾತುಕತೆಗೆ ಮುಂದಾಗಿದೆ. ಸೌದಿ ಅರೇಬಿಯ ಟರ್ಕಿಯಲ್ಲಿ ಹೂಡಿಕೆ ಮಾಡುವುದರಿಂದ ಈ ವರ್ಷ 400 ಶತಕೋಟಿ ಡಾಲರ್‌ಗೂ ಹೆಚ್ಚು ಆದಾಯ ಗಳಿಸುವ ನಿರೀಕ್ಷೆ ಬೆಳೆದಿದೆ. ಇದಲ್ಲದೆ ಈಜಿಪ್ಟ್ ಮತ್ತು ಇಸ್ರೇಲ್ ಜೊತೆಗಿನ ಸಂಬಂಧವನ್ನು ಸುಧಾರಿಸಲು ಟರ್ಕಿ ಹಲವು ಕ್ರಮಗಳನ್ನು ಕೈಗೊಂಡಿದೆ.

AV Eye Hospital ad

ಸೌದಿ ಅರೇಬಿಯದಿಂದ ಅಂತರ ಕಾಯ್ದುಕೊಂಡ ಅಮೆರಿಕ
ಸೌದಿ ಅರೇಬಿಯ ಮತ್ತು ಅಮೆರಿಕದ ನಡುವೆ ಸಂಬಂಧ ಹದಗೆಟ್ಟಿದೆ. ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಯಾವುದೇ ಶಾಸಕರು ಈವರೆಗೂ ಸೌದಿ ಅರೇಬಿಯಗೆ ಭೇಟಿ ನೀಡಿಲ್ಲ. ರಷ್ಯಾದೊಂದಿಗೆ ಒಪೆಕ್ ನೇತೃತ್ವದ ಒಪ್ಪಂದಕ್ಕೆ ಅಂಟಿಕೊಂಡಿರುವುದರಿಂದ ಸೌದಿಯನ್ನು ಅಮೆರಿಕ 'ಕೆಟ್ಟ ಕಾರ್ಯತಂತ್ರದ ಪಾಲುದಾರ' ಎಂದು ಕರೆದಿದೆ. ಇದೇ ಭಿನ್ನಾಭಿಪ್ರಾಯದಲ್ಲಿ ಸೌದಿ ಅರೇಬಿಯಾದಿಂದ ಅಮೆರಿಕ ಅಂತರ ಕಾಯ್ದುಕೊಂಡಿದೆ.

ಜಮಾಲ್ ಕಶೋಗಿ ಹತ್ಯೆ

ಮುಸ್ಲಿಂ ಬ್ರದರ್‌ಹುಡ್ ಮತ್ತು ಇಸ್ಲಾಮಿಕ್‌ ವಿರೋಧಿ ಗುಂಪುಗಳಿಗೆ ಬೆಂಬಲ ಸೂಚಿಸುವುದನ್ನು ವಿರೋಧಿಸಿ ಸೌದಿ ಅರೇಬಿಯ, ಟರ್ಕಿಯೊಂದಿಗೆ ತನ್ನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿತ್ತು. ಮುಂದಿನ ದಿನಗಳಲ್ಲಿ ಟರ್ಕಿ ಇದನ್ನು ಸರಿಪಡಿಸಬೇಕಿದೆ. ಪತ್ರಕರ್ತ ಜಮಾಲ್ ಕಶೋಗಿ ದಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಸೌದಿ ಅರೆಬಿಯದ ಆಡಳಿತಗಾರರಾದ ದೊರೆ ಸಲ್ಮಾನ್,  ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ ಸರ್ಕಾರವನ್ನು ಟೀಕಿಸಿ ಅಂಕಣಗಳನ್ನು ಬರೆಯುತ್ತಿದ್ದರು. ಕಶೋಗಿ, ಸೌದಿ ಅರೇಬಿಯಾದ ರಾಜಮನೆತನದ ಕಟು ಟೀಕಾಕಾರರಾಗಿದ್ದರು. ಸೌದಿಯಲ್ಲಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ಬಹಳ ಲೇಖನಗಳನ್ನು ಬರೆದಿದ್ದಾರೆ. ಯೆಮೆನ್‌ ಮೇಲೆ ಸೌದಿ ಆಡಳಿತ ನಿರ್ಬಂಧ ವಿಧಿಸಿರುವುದು, ತಮ್ಮ ವಿರುದ್ಧದ ಪ್ರಗತಿಪರ ಹೋರಾಟಗಾರರನ್ನು ಸೌದಿ ಸರ್ಕಾರ ನಿರ್ಬಂಧಿಸುವುದು ಸರಿಯಲ್ಲ ಎಂದು ಅಭಿಪ್ರಾಯಗಳನ್ನು ಬರೆದಿದ್ದರು. ರಾಜಕುವರನಿಗೆ ದೂರಗಾಮಿ ಚಿಂತನೆಗಳಿಲ್ಲದ ಕುರಿತು ಕಳವಳ ವ್ಯಕ್ತಪಡಿಸಿದ್ದರು. 

ಕಶೋಗಿ ತನ್ನ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಅಕ್ಟೋಬರ್ 2, 2018 ರಂದು ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಅರೆಬಿಯದ ರಾಯಭಾರ ಕಚೇರಿಗೆ ಹೋಗಿದ್ದರು. ಯಾವುದೇ ಸಿಸಿಟವಿಯಲ್ಲಿ ಅವರು ಹೊರಬರುವುದು ಗೋಚರವಾಗಲಿಲ್ಲ. ಅವರನ್ನು ರಾಯಭಾರ ಕಚೇರಿಯಲ್ಲೇ ಬರ್ಬರವಾಗಿ, ಸಜೀವವಾಗಿ ದೇಹವನ್ನು ಕತ್ತರಿಸಿ ಕೊಲ್ಲಲಾಗಿದೆ ಎಂದು ಟರ್ಕಿಯ ಅಧಿಕಾರಿಗಳು ಹೇಳಿದ್ದರು. ಇದರ ನಡುವೆ ಅವರನ್ನು ಕಾಣೆಯಾದ ವ್ಯಕ್ತಿ ಎಂದು ಟರ್ಕಿ ಘೋಷಿಸಿತ್ತು. ಅಕ್ಟೋಬರ್ 15ರಂದು ಸೌದಿ ಅರೇಬಿಯ ಮತ್ತು ಟರ್ಕಿ ಅಧಿಕಾರಿಗಳು ರಾಯಭಾರ ಕಚೇರಿ ಪರಿಶೀಲಿಸಿದ್ದರು. ಟರ್ಕಿಯ ಅಧಿಕಾರಿಗಳು ಕಶೋಗಿಯನ್ನು ಕೊಂದು ಸಾಕ್ಷ್ಯವನ್ನು ತಿರುಚಿದ್ದಾರೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದರು.

ಟರ್ಕಿ ಪ್ರತಿಕ್ರಿಯೆ
ಅಕ್ಟೋಬರ್ 31 ರಂದು, ಇಸ್ತಾನ್‌ಬುಲ್‌ನ ಮುಖ್ಯ ಸರ್ಕಾರಿ ವಕೀಲರು, "ರಾಯಭಾರ ಕಚೇರಿಯ ಕಟ್ಟಡ ಪ್ರವೇಶಿಸಿದ ತಕ್ಷಣ ಕಶೋಗಿಯ ಕತ್ತು ಹಿಸುಕಲಾಗಿದೆ ಮತ್ತು ಅವರ ದೇಹವನ್ನು ತುಂಡರಿಸಿ ಸಾಗಿಸಲಾಗಿದೆ" ಎಂದು ಹೇಳಿಕೆ ಬಿಡುಗಡೆ ಮಾಡಿದರು. ಧ್ವನಿ ದಾಖಲೆಗಳಲ್ಲಿ ಸೆರೆಹಿಡಿಯಲಾದ ಕಶೋಗಿಯ ಕೊನೆಯ ಮಾತುಗಳು "ನನಗೆ ಉಸಿರಾಡಲು ಸಾಧ್ಯವಿಲ್ಲ" ಎಂದು ವರದಿಯಾಗಿದೆ ಎಂದು ಅವರು ಹೇಳಿದ್ದರು. ಈ ದ್ವನಿಮುದ್ರಣವನ್ನು ಟರ್ಕಿ ಸರ್ಕಾರ ಬಿಡುಗಡೆ ಮಾಡಿತ್ತು. ಸೌದಿ ರಾಜಮನೆತನದ ಆದೇಶದ ಮೇರೆಗೆ ಕಶೋಗಿ ಅವರ ಹತ್ಯೆಯಾಗಿದೆ ಎಂಬುದಕ್ಕೆ ಈ ರೆಕಾರ್ಡಿಂಗ್ ಪುರಾವೆಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದರು.
 
ಸಂಬಂಧಗಳಲ್ಲಿ ಬಿರುಕು 

ಸೌದಿ ಅರೇಬಿಯ ಆರಂಭದಲ್ಲಿ, ಈ ಸಾವನ್ನು ನಿರಾಕರಿಸಿತು ಮತ್ತು ನನಗೂ ಈ ಕೊಲೆಗೂ ಯಾವುದೇ ಸಂಬಂದವಿಲ್ಲವೆಂದು ಹೇಳಿತ್ತು. ಟರ್ಕಿ ನಡೆಸಿದ ಪೂರ್ವಯೋಜಿತ ಕೊಲೆಯಿದು ಎಂದು ಸೌದಿ ಅರೇಬಿಯ ದೊರಿತ್ತು.

ನಂತರ ಸೌದಿ ಅರೇಬಿಯ ಟರ್ಕಿಯ ರಫ್ತುಗಳ ಮೇಲೆ ನಿರ್ಬಂಧ ಹೇರಲು ಪ್ರಾರಂಭಿಸಿತು. ದ್ವಿಪಕ್ಷೀಯ ವ್ಯಾಪಾರದಲ್ಲಿ ಸುಮಾರು 5 ಶತಕೋಟಿ ಡಾಲರ್‌ ನಷ್ಟವಾಗುವಂತೆ ಮಾಡಿತ್ತು. ಜನಪ್ರಿಯ ಟರ್ಕಿ ಮೂಲದ ಧಾರವಾಹಿಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತು. 

ಕಶೋಗಿ ಹತ್ಯೆಗೆ ಹಿಂದಿನ ವ್ಯವಹಾರ

ಕಶೋಗಿಯ ಹತ್ಯೆಗೂ ಮುನ್ನ ಟರ್ಕಿಯಲ್ಲಿ ಸೌದಿ ಅರೇಬಿಯ ಎರಡು ಶತಕೋಟಿ ಡಾಲರ್‌ ಬಂಡವಾಳವನ್ನು ಹೂಡಿಕೆ ಮಾಡಿತ್ತು ಮತ್ತು ಸೌದಿ ಅರೇಬಿಯಾದಲ್ಲಿ ಟರ್ಕಿಯ ಹೂಡಿಕೆಯು ಸುಮಾರು 660 ಶತಕೋಟಿ ಡಾಲರ್‌ ಮೌಲ್ಯದ್ದಾಗಿತ್ತು. ಟರ್ಕಿಯ ವಿದೇಶಾಂಗ ಸಚಿವಾಲಯದ ಪ್ರಕಾರ, 200ಕ್ಕೂ ಹೆಚ್ಚು ಟರ್ಕಿಶ್ ಕಂಪನಿಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹತ್ಯೆಯ ಒಂದು ವರ್ಷದ ಮೊದಲು, ಸೌದಿ ನಾಗರಿಕರು ಟರ್ಕಿಯಲ್ಲಿ 3,500ಕ್ಕೂ ಹೆಚ್ಚು ಆಸ್ತಿಗಳನ್ನು ಖರೀದಿಸಿದ್ದರು.

ಪ್ರಸುತ್ತ ಸನ್ನಿವೇಶದ ಪರಿಣಾಮಗಳು?
ಜಾಗತಿಕವಾಗಿ ಹಲವು ವರ್ಷಗಳಲ್ಲಿ ಸರ್ವಾಧಿಕಾರದಿಂದ ಮುಸ್ಲಿಂ ದೇಶಗಳನ್ನು ಹತ್ತಿಕಲಾಗಿದೆ ಎನ್ನುವ ನಿಲುವಿನಲ್ಲಿ ಸೌದಿ ಅರೇಬಿಯ ಈಗ ಟರ್ಕಿ ಮತ್ತು ಇರಾನ್‌ ಕುರಿತು ಹೆಚ್ಚು ಕಾಳಜಿ ವಹಿಸಿದೆ. ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಸೇರಿದಂತೆ ನಿರ್ಬಂಧಗಳನ್ನು ತೆಗೆದು ಹಾಕುವತ್ತ ಟರ್ಕಿ ಮತ್ತು ಸೌದಿ ಅರೇಬಿಯ ಸಂಬಂಧ ಸಾಗಿದೆ.

ಟರ್ಕಿ ಮತ್ತು ಇರಾನ್ ಪ್ರತಿಸ್ಪರ್ಧಿಗಳಲ್ಲದಿದ್ದರೂ, ಸಿರಿಯಾ ಮತ್ತು ಇರಾಕ್‌ನಲ್ಲಿ ಅಧಿಕಾರಕ್ಕಾಗಿ ಸ್ಪರ್ಧಿಸಿವೆ. ಎರಡು ದೇಶಗಳು ಗಡಿ ಹಂಚಿಕೊಂಡಿವೆ. ಟರ್ಕಿ ಗಲ್ಫ್ ಅರಬ್ ರಾಷ್ಟ್ರಗಳೊಂದಿಗೆ ನಿಕಟವಾಗಿ ಹೊಂದಿಕೊಂಡಿರುವುದು ಇರಾನ್ ಮೇಲಿನ ಅನೇಕ ನಿರ್ಬಂಧ ಸಡಿಲಿಸುವ ಸಾಧ್ಯತೆಯಿದೆ. ಇದರಿಂದ ಗಲ್ಫ್ ಅರಬ್ ರಾಜ್ಯಗಳ ನಡುವೆ ರಾಜತಾಂತ್ರಿಕ ಸಂಬಂಧ ಸುಧಾರಿಸಬಹುದು. ವಿದೇಶಾಂಗ ನೀತಿ  ಮತ್ತಷ್ಟು ಬಲಗೊಳ್ಳಬಹುದು. ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಟರ್ಕಿಯು ಎದುರಿಸುತ್ತಿರುವ ರಾಜತಾಂತ್ರಿಕ ಪ್ರತ್ಯೇಕತೆಯನ್ನು ಸರಾಗಗೊಳಿಸುವಲ್ಲಿ ಈ ಸಂಬಂಧ ಸಹಾಯ ಮಾಡುವುದು ಬಹುತೇಕ ಖಚಿತವಾಗಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app