ಈ ಜಗತ್ತು | ಪ್ರವಾಹದಿಂದ 603 ಮಂದಿ ಸಾವು; ಹಲವು ಹೆಕ್ಟೇರ್ ಭೂಮಿ ನಾಶ

  • 1.3 ದಶಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಲಾಗಿದೆ
  • 100ಕ್ಕೂ ಅಧಿಕ ಉಕ್ರೇನ್‌ ಮಹಿಳೆಯರ ಮೇಲೆ ಅತ್ಯಾಚಾರ

ನೈಜೀರಿಯ

ಪ್ರವಾಹದಿಂದ 603 ಮಂದಿ ಸಾವು 

Eedina App

ಈ ವರ್ಷ ನೈಜೀರಿಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 603ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಸಾವಿರಾರು ಮನೆಗಳು ಮುಳುಗಡೆಯಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. 

ನೈಜೀರಿಯದ ರಾಷ್ಟ್ರೀಯ ವಿಪತ್ತು ದಳದ ಪ್ರಕಾರ ಇದುವರೆಗೆ 1.3 ದಶಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಲಾಗಿದೆ. 340,000 ಹೆಕ್ಟೇರ್ ಭೂಮಿ ನಾಶವಾಗಿದೆ. ಹೀಗಾಗಿ ದೇಶದಲ್ಲಿ ಆಹಾರ ಬಿಕ್ಕಟ್ಟು ಉಂಟಾಗಿದೆ ಎಂದು ತಿಳಿಸಿದೆ.

AV Eye Hospital ad

ರಷ್ಯಾ- ಉಕ್ರೇನ್‌ 

ವಯಾಗ್ರ ಸೇವಿಸಿ ಉಕ್ರೇನ್‌ ಮಹಿಳೆಯರ ಅತ್ಯಾಚಾರ

ಉಕ್ರೇನ್‌ ಅನ್ನು ನಾಶ ಮಾಡಲು ರಷ್ಯಾ ತೀವ್ರ ಯುದ್ಧ ಮಾಡುತ್ತಿದ್ದು, ಉಕ್ರೇನ್‌ ಮಹಿಳೆಯರನ್ನು ಅತ್ಯಾಚಾರ ಮಾಡಲು ರಷ್ಯಾ ತನ್ನ ಸೈನಿಕರಿಗೆ ಕಾಮೋದ್ರೇಕಗೊಳಿಸುವ ವಯಾಗ್ರ ಮಾತ್ರೆ ನೀಡುತ್ತಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ರಷ್ಯಾ- ಉಕ್ರೇನ್‌ ಯುದ್ಧ ಆರಂಭವಾದ ನಂತರ ಈವರೆಗೆ ಸುಮಾರು 100ಕ್ಕೂ ಅಧಿಕ ಉಕ್ರೇನ್‌ ಮಹಿಳೆಯರ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸಗಲು ರಷ್ಯಾ ಸರ್ಕಾರ ಸೈನಿಕರಿಗೆ ವಯಾಗ್ರ ಪೂರೈಸುತ್ತಿದೆ. ಇದು ವ್ಲಾಡಿಮರ್ ಪುಟಿನ್‌ ಸರ್ಕಾರದ ಯುದ್ಧ ತಂತ್ರ ಎಂದು ವಿಶ್ವ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ.

ಅಮೆರಿಕ

ಕೋವಿಡ್‌ ಹೊಸ ತಳಿ ಪತ್ತೆ

ಭೀಕರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಅಮೆರಿಕದಲ್ಲಿ ಕೋವಿಡ್‌ ಹೊಸ ತಳಿ ಪತ್ತೆಯಾಗಿದ್ದು, ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಿಎಫ್‌ 7 ಎಂದು ಈ ಹೊಸ ತಳಿಗೆ ಹೆಸರಿಸಲಾಗಿದೆ.

ಚೀನಾದ ಮಂಗೋಲಿಯ ಪ್ರಾಂತ್ಯದಲ್ಲಿ ಬಿಎಫ್‌ 7 ಹೊಸ ರೂಪಾಂತರಿ ತಳಿ ಮೊದಲು ಪತ್ತೆಯಾಗಿದೆ. ಕೊರೊನಾ ವೈರಸ್ ಕೋವಿಡ್ ಓಮಿಕ್ರಾನ್ ರೂಪಾಂತರಿಯ ಹೊಸ ಉಪ ರೂಪಾಂತರಿ ತಳಿ ಎಂದು ಬಿಎಫ್‌ 7 ಅನ್ನು ಹೆಸರಿಸಲಾಗಿದ್ದು, ಇದು ಅತ್ಯಂತ ವೇಗವಾಗಿ ಹರಡುವ ಹಾಗೂ ಸೋಂಕಿನ ತೀವ್ರತೆ ಹೆಚ್ಚಾಗಿರುವ ರೂಪಾಂತರಿಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app