ಈ ಜಗತ್ತು| ವಿಶ್ವ ಸಮರದಲ್ಲಿ ನಾಝೀ ಸೇನೆಗೆ ಸಹಾಯ ಆರೋಪ; 101 ವರ್ಷದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

  • ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
  • ದ್ವೇಷ ಪ್ರಚೋದಿಸುವ ಟ್ಟೀಟ್‌ ತಡೆಯಲು ವಿಫಲ
Image

ಜರ್ಮನಿ

ನಾಝಿ ಸೇನೆಗೆ ಸಹಾಯ ಮಾಡಿದ 101 ವರ್ಷದ ಮುದುಕನಿಗೆ ಜೈಲು ಶಿಕ್ಷೆ

ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿಗಳ ಸಚ್‌ಸೆನ್‌ಹೌಸೆನ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ 101 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಮಂಗಳವಾರ ಜರ್ಮನಿಯ ಪ್ರಾದೇಶಿಕ ನ್ಯಾಯಾಲಯವು ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ 
ಜೋಸೆಫ್ ಎಸ್ ಎಂದು ಆತನ ಹೆಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನಾಝೀ ಶಿಬಿರದಲ್ಲಿ ಎಸ್‌ಎಸ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಕೈದಿಗಳ ಹತ್ಯೆಗೆ ಸಹಾಯ ಮಾಡಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

1942 ಮತ್ತು 1945ರ ನಡುವೆ ಬರ್ಲಿನ್‌ನ ಹೊರವಲಯದಲ್ಲಿರುವ ಶಿಬಿರದಲ್ಲಿ ನಾಜಿ ಪಕ್ಷದ ಅರೆಸೈನಿಕ ವಿಭಾಗದ ಸೇರ್ಪಡೆಗೊಂಡ ಸದಸ್ಯರಾಗಿ ಕೆಲಸ ಮಾಡಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯವು ಪರಿಗಣಿಸಿದೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.

Image

ಆಸ್ಟ್ರೇಲಿಯ

ದ್ವೇಷ ಪ್ರಚೋದಿಸುವ ಟ್ಟೀಟ್‌ ತಡೆಯಲು ಟ್ವಿಟರ್ ವಿಫಲ

ದ್ವೇಷ ಪ್ರಚೋದಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಟ್ವಿಟರ್ ವಿಫಲವಾಗಿದೆ ಎಂದು ಆಸ್ಟ್ರೇಲಿಯದಲ್ಲಿ ವಾಸಿಸುವ ಮುಸ್ಲಿಂ ಸಮುದಾಯ ಆರೋಪಿಸಿದೆ.

77 ಮಂದಿಯನ್ನು 2011ರಲ್ಲಿ ಉಗ್ರಗಾಮಿಯೊಬ್ಬ ಹತ್ಯೆಗೈದ ಪ್ರಕರಣ ಉಲ್ಲೇಖಿಸಿ ಮುಸ್ಲಿಮರ ಮತ್ತು  ಕುರಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ, ಇದು ಖಂಡನೀಯ ಎಂದು ಮುಸ್ಲಿಂ ಸಮುದಾಯ ಬೇಸರ ವ್ಯಕ್ತಪಡಿಸಿದೆ.

ಬಲಪಂಥೀಯರ ಖಾತೆಯಿಂದ ಪೋಸ್ಟ್ ಮಾಡಲಾಗಿರುವ ಈ ಹೇಳಿಕೆಯ ದ್ವೇಷ ಪ್ರಚೋದಿಸುವ ವಿಷಯ ಪರಿಶೀಲಿಸದೆ ಪ್ರಕಟಿಸಿರುವ ಉದ್ಯೋಗಿ ಇದಕ್ಕೆ ಹೊಣೆ ಎಂದು ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಮನವಿ ಮಾಡಿಕೊಂಡರೂ ಟ್ವಿಟರ್ ಕ್ರಮ ಕೈಗೊಂಡಿಲ್ಲ ಎಂದು ಕ್ವೀನ್ಸ್‌ಲ್ಯಾಂಡ್‌ನ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Image

ಅಬುಧಾಬಿ

ಅಬುಧಾಬಿಗೆ ಆಗಮಿಸಿದ ಪ್ರಧಾನಿ ಮೋದಿ

ಜರ್ಮನ್‌ ಪ್ರವಾಸ ಮುಗಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಒಂದು ದಿನದ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅಬುಧಾಬಿಗೆ ಆಗಮಿಸಿದ್ದಾರೆ. ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮೋದಿಗೆ ಸ್ವಾಗತ ಕೋರಿದ್ದಾರೆ. ಯುಎಇ ಜೊತೆ ಪ್ರಧಾನಿ ಮೋದಿ ಹಲವು ವಿಷಯಗಳ ಕುರಿತಾಗಿ ಚರ್ಚೆ ನಡೆಸಲಿದ್ದಾರೆ. ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಲಿದ್ದಾರೆ. ಮೇ 13ರಂದು ನಿಧನರಾಗಿದ್ದ ಯುಎಇ ಅಧ್ಯಕ್ಷ ಶೇಕ್ ಖಲೀಫಾಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್