
- ಕೊರಿಯದ ರಾಜಧಾನಿ ಸೋಲ್ನ ಜನನಿಬಿಡ ವಸತಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತ
- ಉಗ್ರ ಸಂಘಟನೆ ಅಲ್ ಶಬಾಬ್ ಹೇಳಿಕೆಗಳನ್ನು ಬಿಡುಗಡೆ ಮಾಡಿದ ಸೊಮಾಲಿಯ ಸರ್ಕಾರ

ಪಾಕಿಸ್ತಾನ
ಪಾಕ್ಗೆ ವಿದೇಶಿ ನೌಕಾ ಸೇವೆ ಬಂದ್
ಪಾಕಿಸ್ತಾನಕ್ಕೆ ವಿದೇಶಿ ರಾಷ್ಟ್ರಗಳ ನೌಕಾ ಸೇವೆ ರದ್ದಾಗುವ ದಿನಗಳು ಸಮೀಪಿಸುತ್ತಿವೆ. ವಿದೇಶಿ ಪಾವತಿ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸರಕು ಸಾಗಣೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವಿದೇಶಿ ನೌಕಾಯಾನ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಹಲವು ರಾಷ್ಟ್ರಗಳಿಗೆ ಪಾಕಿಸ್ತಾನ ಸರ್ಕಾರದಿಂದ ಕೋಟ್ಯಂತರ ಡಾಲರ್ ಮೊತ್ತದ ಶುಲ್ಕ ಪಾವತಿಯಾಗಿಲ್ಲ. ಹೀಗಾಗಿ, ಸೇವೆಯನ್ನು ಸ್ಥಗಿತಗೊಳಿಸದೆ ಬೇರೆ ದಾರಿ ಇಲ್ಲ ಎಂದು ಕಂಪನಿಗಳು ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಸೂಚ್ಯವಾಗಿ ತಿಳಿಸಿವೆ. ಒಂದು ವೇಳೆ, ನೌಕಾಯಾನ ಸ್ಥಗಿತಗೊಂಡರೆ ಅರ್ಥ ವ್ಯವಸ್ಥೆಗೆ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಪಾಕಿಸ್ತಾನ ಹಡಗು ಏಜೆಂಟರ ಒಕ್ಕೂಟ ಹೇಳಿದೆ.

ದಕ್ಷಿಣ ಕೊರಿಯ
ಸಿಯೋಲ್ನಲ್ಲಿ ಬೆಂಕಿಗೆ 60 ಮನೆಗಳು ನಾಶ
ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್ನ ಜನನಿಬಿಡ ವಸತಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 60 ಮನೆಗಳು ನಾಶವಾಗಿದ್ದು, ಸುಮಾರು 500 ನಿವಾಸಿಗಳು ಮನೆಗಳನ್ನು ತೊರೆದಿದ್ದಾರೆ.
ಗುರಿಯೋಂಗ್ ಗ್ರಾಮದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಐದು ಗಂಟೆಗಳ ಕಾಲ ನಂದಿಸಿದ್ದಾರೆ. ಯಾವುದೇ ಸಾವು- ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಅಧಿಕಾರಿ ಶಿನ್ ಯಾಂಗ್- ಹೋ, ರಕ್ಷಣಾ ಕಾರ್ಯಕರ್ತರು ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಶೋಧ ಮುಂದುವರಿಸಿದ್ದಾರೆ. ನಿವಾಸಿಗಳು ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು 500 ನಿವಾಸಿಗಳನ್ನು ಶಾಲಾ ಜಿಮ್ ಸೇರಿದಂತೆ ಹತ್ತಿರದ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗಂಗ್ನಮ್ ಜಿಲ್ಲಾ ಕಚೇರಿಯ ಅಧಿಕಾರಿ ಕಿಮ್ ಅಹ್-ರೆಮ್ ಹೇಳಿದ್ದಾರೆ.

ಸೊಮಾಲಿಯ
ಗುಂಡಿನ ದಾಳಿಗೆ 100ಕ್ಕೂ ಹೆಚ್ಚು ಮಂದಿ ಸಾವು
ಸೇನೆ ಮತ್ತು ಅಲ್ಕೈದಾ ಬೆಂಬಲಿತ ಉಗ್ರರ ನಡುವಿನ ಭೀಕರ ಕಾಳಗದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಸೊಮಾಲಿಯ ಸರ್ಕಾರ ಉಗ್ರ ಸಂಘಟನೆ ಅಲ್ ಶಬಾಬ್ ಹೇಳಿಕೆಗಳನ್ನು ಬಿಡುಗಡೆ ಮಾಡಿವೆ. ಉಗ್ರ ಸಂಘಟನೆ ಅಲ್ ಶಬಾಬ್ಗೆ ಸೇರಿದ 100ಕ್ಕೂ ಅಧಿಕ ಉಗ್ರರು ಗುಂಡಿನ ಕಾಳಗದಲ್ಲಿ ಹತರಾಗಿದ್ದಾರೆ.
"ಅಮೆರಿಕದಿಂದ ತರಬೇತಿ ಪಡೆದಿರುವ ದಾನಾಬ್ ಬ್ರಿಗೇಡ್ನ ಒಬ್ಬ ಅಧಿಕಾರಿ ಸೇರಿದಂತೆ ಏಳು ಜನ ಯೋಧರು ಮೃತಪಟ್ಟಿದ್ದಾರೆ" ಎಂದು ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, "ಸೊಮಾಲಿಯಾದ 150ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಗಿದೆ" ಎಂದು ಅಲ್ ಶಬಾಬ್ ವಕ್ತಾರ ಶೇಖ್ ಅಬು ಮುಸಾಬ್ ಹೇಳಿದ್ದಾರೆ.

ವೆರ್ವೆಟ್ ಕೋತಿಗಳ ವಂಶವೇ ನಾಶ
ಫಿಲಿಪ್ಸ್ಬರ್ಗ್
ಸದ್ಯದಲ್ಲೇ ಈ ದೇಶದಲ್ಲಿ ವೆರ್ವೆಟ್ ಕೋತಿಗಳ ಇಡೀ ವಂಶವೇ ನಾಶವಾಗಲಿದೆ ಎಂದು ಕೆರೆಬಿಯನ್ ದೇಶ ಸಿಂಟ್ ಮಾರ್ಟಿನ್ ಆದೇಶ ಹೊರಡಿಸಿದೆ.
ಕೆರೆಬಿಯನ್ನಲ್ಲಿ ರೈತರ ಬೆಳೆಗಳಿಗೆ ಕೋತಿಗಳು ತೀವ್ರ ಹಾನಿಯುಂಟು ಮಾಡಿದ್ದು, ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿರುವ ಹಿನ್ನೆಲೆ ಸಾಕಷ್ಟು ನಷ್ಟವಾಗಿದೆ. ಇದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ರೈತರು ಅವಲತ್ತುಕೊಂಡಿರುವುದರಿಂದ ಈ ಕೋತಿಗಳ ವಂಶವನ್ನೇ ನಾಶಗೊಳಿಸಲು ಆದೇಶ ಹೊರಡಿಸಲಾಗಿದೆ.
ನೇಚರ್ ಫೌಂಡೇಶನ್ ಸಂಸ್ಥೆ ಮುಂದಿನ 3 ವರ್ಷಗಳಲ್ಲಿ 450 ಕೋತಿಗಳಿಗೆ ದಯಾಮರಣ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ನಿರ್ಣಯಕ್ಕೆ ಪ್ರಾಣಿ ದಯಾಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬೆಳೆಗಳ ಮೇಲೆ ಕ್ರಿಮಿನಾಶಕ ಸಿಂಪಡಿಸುವುದೋ ಅಥವಾ ಮಂಗಗಳ ಸಂತಾನಹರಣ ಕ್ರಮವನ್ನೋ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ.