
- ಶ್ರೀಲಂಕಾದ ಭವಿಷ್ಯ ಪ್ರಜೆಗಳ ಕೈಯಲ್ಲಿದೆ
- ಕೋವಿಡ್ನಿಂದ ಆಫ್ರಿಕಾದಲ್ಲಿ ಸುಮಾರು 9 ಸಾವಿರ ಸಾವು

ಶ್ರೀಲಂಕಾ
ಜೂನ್ವರೆಗೂ ಇಂಧನಕ್ಕೆ ಯಾವುದೇ ಕೊರತೆಯಿಲ್ಲ
ಜೂನ್ವರೆಗೂ ಶ್ರೀಲಂಕಾದಲ್ಲಿ ಇಂಧನಕ್ಕೆ ಕೊರತೆಯಿಲ್ಲ. ಈ ಆರ್ಥಿಕ ಬಿಕ್ಕಟ್ಟಿನಿಂದ ಶೀಘ್ರವೇ ದೇಶ ಹೊರಬರಲಿದೆ ಎಂದು ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ದೇಶದ ನಾಗರಿಕರಿಗೆ ಭರವಸೆ ನೀಡಿದ್ದಾರೆ. ಶ್ರೀಲಂಕಾದ ಭವಿಷ್ಯ ಪ್ರಜೆಗಳ ಕೈಯಲ್ಲಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡದಂತೆ ಮನವಿ ಮಾಡಿದ್ದಾರೆ.
ಹಿಂಸಾತ್ಮಕ ಪ್ರತಿಭಟನಾಕಾರರನ್ನು ಕಂಡರೆ ಗುಂಡಿಕ್ಕುವಂತೆ ವರದಿ ಮಾಡಲಾಗಿದೆ ಎಂದು ಸರ್ಕಾರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಅಂತಹ ಯಾವುದೇ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಿಲ್ಲ ಸರ್ಕಾರ ನೀಡಿಲ್ಲ ಎಂದು ವಿಕ್ರಮಸಿಂಘೆ ಸ್ಪಷ್ಟಪಡಿಸಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಆರ್ಥಿಕತೆಯ ಚೇತರಿಕೆಗಾಗಿ ವಿಶ್ವಬ್ಯಾಂಕ್ನಿಂದ 160 ಶತಕೋಟಿ ಡಾಲರ್ಗಳನ್ನು ಸ್ವೀಕರಿಸಿದೆ. ಇಂಧನ ಖರೀದಿಸಲು ಈ ಹಣದಲ್ಲಿ ಕೊಂಚ ಬಳಸುವುದಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.
ದೇಶದಲ್ಲಿ ಉಂಟಾಗುತ್ತಿರುವ ಇಂಧನ ಮತ್ತು ಅನಿಲ ಕೊರತೆಯ ವಿರುದ್ಧ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಈ ನಡುವೆ "ವಿಶ್ವ ಬ್ಯಾಂಕ್ನಿಂದ 160 ಶತಕೋಟಿ ಡಾಲರ್ಗಳನ್ನು ಸ್ವೀಕರಿಸಲಾಗಿದೆ. ಎಡಿಬಿಯಿಂದಲೂ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ಅನುದಾನ ನಿರೀಕ್ಷಿಸಲಾಗಿದೆ" ಎಂದು ವಿಕ್ರಮಸಿಂಘೆ ಹೇಳಿದರು.

ಇಂಡೋನೇಷ್ಯಾ
ಮೇ 23ರಿಂದ ತಾಳೆ ಎಣ್ಣೆ ರಫ್ತು ನಿಷೇಧ ತೆರವು
ತಾಳೆ ಎಣ್ಣೆ ರಫ್ತು ನಿಷೇಧವನ್ನು ಮುಂದಿನ ವಾರ ತೆರವುಗೊಳಿಸಲಾಗುತ್ತದೆ ಎಂದು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಗುರುವಾರ ಘೋಷಿಸಿದ್ದಾರೆ. ಉಕ್ರೇನ್ನಲ್ಲಿನ ಯುದ್ಧ, ಜಾಗತಿಕ ತಾಪಮಾನ ಏರಿಕೆ ಮತ್ತು ಇತರ ಕಾರಣಗಳಿಂದಾಗಿ ಅಡುಗೆ ಎಣ್ಣೆ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಸದ್ಯ ಈ ನಿರ್ಧಾರದಿಂದಾಗಿ ಜಾಗತಿಕ ಅಡುಗೆ ಎಣ್ಣೆ ಮಾರುಕಟ್ಟೆ ಮೇಲಿನ ಒತ್ತಡ ನಿವಾರಣೆಯಾಗುವ ಸಾಧ್ಯತೆಗಳಿವೆ. "ಅಡುಗೆ ಎಣ್ಣೆಯ ಪೂರೈಕೆ, ಪರಿಸ್ಥಿತಿ, ತಾಳೆ ಎಣ್ಣೆ ಉದ್ಯಮದಲ್ಲಿರುವ 1.7 ಕೋಟಿ ಜನರು, ರೈತರು ಮತ್ತು ಇತರ ಕಾರ್ಮಿಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ತಾಳೆ ಎಣ್ಣೆ ರಫ್ತು ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ" ಎಂದು ಜೋಕೊ ವಿಡೋಡೊ ತಿಳಿಸಿದ್ದಾರೆ.

ಕಡಿಮೆಯಾದ ಕೊರೋನ ವೈರಸ್ ಸಾವಿನ ಪ್ರಕರಣ
ಕಳೆದ ವಾರದಲ್ಲಿ ಜಾಗತಿಕವಾಗಿ ಕೊರೋನ ವೈರಸ್ ಸಾವಿನ ಸಂಖ್ಯೆ ಶೇಕಡಾ 21ರಷ್ಟು ಕಡಿಮೆಯಾಗಿದೆ. ಆದರೆ, ವಿಶ್ವದ ಹೆಚ್ಚಿನ ಭಾಗಗಳಲ್ಲಿ ಪ್ರಕರಣಗಳು ಹೆಚ್ಚಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಗುರುವಾರ ಬಿಡುಗಡೆಯಾದ ಸಾಂಕ್ರಾಮಿಕ ರೋಗದ ಸಾಪ್ತಾಹಿಕ ವರದಿಯಲ್ಲಿ ಕಳೆದ ವಾರ 3.5 ಲಕ್ಷ ಪ್ರಕರಣಗಳು ಹೆಚ್ಚಾಗಿವೆ. ಸಾವಿನ ಪ್ರಮಾಣ 1 ರಷ್ಟು ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಮಂಡಳಿ ತಿಳಿಸಿದೆ. ಅಮೆರಿಕ, ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಪಶ್ಚಿಮ ಪೆಸಿಫಿಕ್ನಲ್ಲಿ ಪ್ರಕರಣಗಳು ಹೆಚ್ಚಾಗಿದ್ದರೆ, ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಪ್ರಕರಣಗಳು ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ಸೋಂಕಿನ ಪ್ರಮಾಣ ಶೇಕಡಾ 60ಕ್ಕಿಂತ ಹೆಚ್ಚಾಗಿದೆ ಮತ್ತು ಅಮೆರಿಕದಲ್ಲಿ ಶೇಕಡಾ 26 ರಷ್ಟು ಏರಿಕೆಯಾಗಿದೆ. ಆದರೆ, ಸಾವುಗಳು ಆಫ್ರಿಕಾವನ್ನು ಹೊರತುಪಡಿಸಿ ಬೇರೆ ದೇಶಗಳಲ್ಲಿ ಕುಸಿತ ಕಂಡಿವೆ. ಆಫ್ರಿಕಾದಲ್ಲಿ ಸುಮಾರು 9,000 ಸಾವುಗಳು ದಾಖಲಾಗಿವೆ.