ವಿಶ್ವ ಜನಸಂಖ್ಯೆ ಇಂದು 800 ಕೋಟಿ ತಲುಪಲಿದೆ: ವಿಶ್ವಸಂಸ್ಥೆ ವರದಿ

World population to reach 8 billion: UN report
  • 2080ರ ಹೊತ್ತಿಗೆ ವಿಶ್ವದ ಜನಸಂಖ್ಯೆ ಸುಮಾರು ಒಂದು ಸಾವಿರ ಕೋಟಿ ತಲುಪುವ ಸಾಧ್ಯತೆ
  • ಮುಂದಿನ ವರ್ಷ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಂಬರ್ ಒನ್‌ 

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಮಂಗಳವಾರದಂದು ವಿಶ್ವದ ಜನಸಂಖ್ಯೆ 8 ಶತಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಭಾರತ ಮೊದಲ ಸ್ಥಾನಕ್ಕೆ ಏರುವ ಸಾಧ್ಯತೆಗಳು ಹೆಚ್ಚಾಗಿವೆ.  

ಈ ವರ್ಷದ ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವದ ಜನಸಂಖ್ಯೆಯು ನವೆಂಬರ್‌ 15, 2022ರಂದು 800 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ 2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. 

Eedina App

ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕ ಜನಸಂಖ್ಯೆಯ 2030ರಲ್ಲಿ ಸುಮಾರು 8.5 ಶತಕೋಟಿ, 2050ರಲ್ಲಿ 9.7 ಶತಕೋಟಿ ಮತ್ತು 2080ರಲ್ಲಿ ಸುಮಾರು 10.4 ಶತಕೋಟಿ ಬೆಳೆಯಬಹುದು. 2100ರವರೆಗೆ ಅದೇ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? 8 ಶತಕೋಟಿಗೇರಲಿದೆ ವಿಶ್ವ ಜನಸಂಖ್ಯೆ; ಪ್ರಾದೇಶಿಕ ಅಸಮಾನತೆಯೊಂದಿಗೆ ಬೆಳೆಯುತ್ತಿರುವ ಮನುಕುಲ 

AV Eye Hospital ad

ಮೂರು ಪಟ್ಟು ಏರಿದ ವಿಶ್ವ ಜನಸಂಖ್ಯೆ

ವಿಶ್ವ ಜನಸಂಖ್ಯೆಯ ವರದಿ ಪ್ರಕಾರ, 1950ರಲ್ಲಿ  ಇದ್ದ ಜಾಗತಿಕ ಜನಸಂಖ್ಯೆ 2.5 ಶತಕೋಟಿ. ಈಗ ಇದು ಮೂರು ಪಟ್ಟು ಹೆಚ್ಚಾಗಿದೆ. 1960ರ ದಶಕದ ಆರಂಭದಲ್ಲಿ ವಿಶ್ವದ ಜನಸಂಖ್ಯೆ ಬೆಳವಣಿಗೆಯ ದರ ದಿಢೀರ್ ಕಡಿಮೆಯಾಗಿದೆ. ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962ರಿಂದ 1965ರವರೆಗೆ ಗರಿಷ್ಠ ಶೇ. 2.1 ಇತ್ತು. ಅದು 2020ರಲ್ಲಿ ಶೇ. 1ಕ್ಕಿಂತ ಕಡಿಮೆಯಾಗಿದೆ. 2050ರ ವೇಳೆಗೆ ಆ ಅಂಕಿ ಅಂಶವು ಸುಮಾರು ಶೇ. 0.5ಕ್ಕೆ ಕುಸಿಯಬಹುದು. ಏಕೆಂದರೆ ಫಲವತ್ತತೆ ದರಗಳಲ್ಲಿನ ನಿರಂತರ ಕುಸಿತ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಲು ಕಾರಣ ಎಂದು ವಿಶ್ವಸಂಸ್ಥೆ ತಿಳಿಸಿದೆ.

2022ರಲ್ಲಿ, ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು ಏಷ್ಯಾದಲ್ಲಿವೆ. ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ 2.3 ಶತಕೋಟಿ ಜನರಿದ್ದು, ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತ, ತಲಾ 1.4 ಶತಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿವೆ.

ಎಂಟು ದೇಶಗಳಲ್ಲಿ ಕೇಂದ್ರೀಕೃತ

2050ರವರೆಗಿನ ಜಾಗತಿಕ ಜನಸಂಖ್ಯೆಯ ಯೋಜಿತ ಹೆಚ್ಚಳದಲ್ಲಿ, ಅರ್ಧಕ್ಕಿಂತ ಹೆಚ್ಚು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್ ಹಾಗೂ ತಾಂಜನಿಯಾ. ವಿಶ್ವದ ಅತಿದೊಡ್ಡ ದೇಶಗಳ ನಡುವಿನ ವಿಭಿನ್ನ ಬೆಳವಣಿಗೆ ದರಗಳು ಗಾತ್ರದ ಮೂಲಕ ತಮ್ಮ ಶ್ರೇಯಾಂಕವನ್ನು ಮರು ಕ್ರಮಗೊಳಿಸುತ್ತವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಸಂತಾನಫಲ ದರ ಕುಸಿತ ಸಾಧ್ಯತೆ

2021ರಲ್ಲಿ ಸರಾಸರಿ ಫಲವತ್ತತೆಯ ದರದ ಪ್ರಕಾರ, ಜೀವಿತಾವಧಿಯಲ್ಲಿ ಪ್ರತಿ ಮಹಿಳೆಗೆ 2.3 ಮಕ್ಕಳಾಗಿದ್ದು, 1950ಕ್ಕೆ ಹೋಲಿಸಿದರೆ ಸುಮಾರು ಐದರಷ್ಟು ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ, 2050ರ ವೇಳೆಗೆ ಆ ಸಂಖ್ಯೆ 2.1ಕ್ಕೆ ಇಳಿಯಲಿದೆ.

ಹೆಚ್ಚಾಗುತ್ತಲೇ ಇದೆ ಜೀವಿತಾವಧಿ

ಜಾಗತಿಕ ಜನಸಂಖ್ಯೆಯ ಬೆಳವಣಿಗೆ ಪೂರಕವಾಗಿರುವ ಪ್ರಮುಖ ಅಂಶವೆಂದರೆ ಸರಾಸರಿ ಜೀವಿತಾವಧಿ ಹೆಚ್ಚಾಗುತ್ತಲೇ ಇರುವುದು. 1990ರಲ್ಲಿ ಇದ್ದ ಜೀವಿತಾವಧಿ 72 ವರ್ಷ. 2019ರ ವೇಳೆಗೆ ಮನುಷ್ಯನ ಜೀವತಾವಧಿ  ಸರಾಸರಿ 77 ವರ್ಷಗಳಾಗಿವೆ. 1990ಕ್ಕೆ ಹೋಲಿಸಿದರೆ ಒಂಬತ್ತು ವರ್ಷಗಳು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. 

ಚೀನಾ ಹಿಂದಿಕ್ಕಲಿರುವ ಭಾರತ 

ವಿಶ್ವಸಂಸ್ಥೆಯ ಪ್ರಕಾರ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾದ ಚೀನಾ ಮತ್ತು ಭಾರತಗಳ ಸ್ಥಾನಗಳು ಏರುಪೇರಾಗಲಿವೆ. ಚೀನಾದ ಜನಸಂಖ್ಯೆ 2050ರ ವೇಳೆಗೆ ಕುಸಿಯಲಿದ್ದು, ಭಾರತದ ಜನಸಂಖ್ಯೆ ಏರಿಕೆಯಾಗಲಿದೆ.

ಈ ಶತಮಾನದ ಅಂತ್ಯದ ವೇಳೆಗೆ, ಚೀನಾ ಜನಸಂಖ್ಯೆ 80 ಕೋಟಿಗೆ ಕುಸಿಯುತ್ತದೆ. ಭಾರತದ ಜನಸಂಖ್ಯೆಯು ಪ್ರಸ್ತುತ ಚೀನಾಕ್ಕಿಂತ ಸ್ವಲ್ಪ ಕೆಳಗಿದ್ದು, 2050ರ ವೇಳೆಗೆ 1.7 ಶತಕೋಟಿಗೆ ಬೆಳೆಯುತ್ತದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app