ಈ ಜಗತ್ತು | ರಷ್ಯಾ ಉಕ್ರೇನ್‌ ಯುದ್ಧ; ವಿಶ್ವಸಂಸ್ಥೆ ಮಧ್ಯಸ್ಥಿಕೆ

  • ತೀವ್ರ ಶಾಖ ಎದುರಿಸಲಿರುವ ಅಮೆರಿಕ
  • ಹವಾಮಾನ ಬದಲಾವಣೆ ಆಘಾತಕಾರಿ

ವಿಶ್ವಸಂಸ್ಥೆ

ರಷ್ಯಾ ಉಕ್ರೇನ್‌ ಯುದ್ಧಕ್ಕೆ ವಿಶ್ವಸಂಸ್ಥೆ ಮಧ್ಯಸ್ಥಿಕೆ 

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ಅವರು ಭೇಟಿ ಮಾಡಲಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಹ್ವಾನದ ನೀಡಿದ ಹಿನ್ನೆಲೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಮತ್ತು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ. ಇದಾದ ನಂತರ ರಷ್ಯಾ ಉಕ್ರೇನ್‌ ಯುದ್ಧ ನಿಲ್ಲಿಸುವ ಕುರಿತು ಮಾತುಗಳನ್ನಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅಮೆರಿಕ
2053ಕ್ಕೆ ವಿನಾಶದತ್ತ ಅಮೆರಿಕ 

ನೈಸರ್ಗಿಕ ವಿಪತ್ತುಗಳಿಗೆ ಅಮೆರಿಕ ಗುರಿಯಾಗುತ್ತಲೆ ಇರುತ್ತದೆ. ಚಂಡಮಾರುತ, ಭೂಕಂಪ, ಭೀಕರ ಮಳೆ, ಪ್ರವಾಹ ಹೀಗೆ ಅನೇಕ ವಿನಾಶಕ್ಕೆ ಬಲಿಯಾಗುವ ಅಮೆರಿಕದ ಮತ್ತೊಂದು ಸುದ್ದಿ ಕೇಳಿ ಬೆಚ್ಚಿ ಬಿದ್ದಿದೆ. 2053 ರಲ್ಲಿ ಅಮೆರಿಕ ಭೀಕರ ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದೆ.

ಹವಾಮಾನ ಬದಲಾವಣೆ ಕುರಿತು ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ 2053ರ ವೇಳೆಗೆ ಅಮೆರಿಕ ತೀವ್ರ ಶಾಖದ ಹಿಡಿತಕ್ಕೆ ಸಿಲುಕಲಿದ್ದು, ಅಲ್ಲಿನ ತಾಪಮಾನ 52 ಡಿಗ್ರಿ ತಲುಪಲಿದೆ. ಅಮೆರಿಕದ ಜನಸಂಖ್ಯೆಯ ಅರ್ಧದಷ್ಟು ಜನರು ತೀವ್ರ ಶಾಖವನ್ನು ಎದುರಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app