ಈ ಜಗತ್ತು | ಅಮೆರಿಕದ ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿಗೆ 10 ಮಂದಿ ಸಾವು

Shooting at Walmart in America: 10 dead
  • ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವು
  • ಟರ್ಕಿ ಮೇಲೆ ಕ್ಷಿಪಣಿ ಪ್ರಯೋಗಿಸಿದ ಸಿರಿಯಾ
Image
 Shooting at Walmart in America: 10 dead

ಅಮೆರಿಕ

ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ

ಚೆಸಾಪೀಕ್ ನಗರದ ಸ್ಯಾಮ್‌ ಸರ್ಕಲ್‌ನ ವಾಲ್‌ಮಾರ್ಟ್‌ ಮಳಿಗೆಯಲ್ಲಿ ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವರ್ಜೀನಿಯಾ ರಾಜ್ಯದ ಸೆನೆಟರ್ ಲೂಯಿಸ್ ಲ್ಯೂಕಾಸ್, "ಅಮೆರಿಕದ ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿ ಇಂದು ರಾತ್ರಿ ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ‌ತಮ್ಮ ಜಿಲ್ಲೆಯ ವಾಲ್‌ಮಾರ್ಟ್‌ನಲ್ಲಿ ನಡೆದಿರುವುದು ದುರದೃಷ್ಟಕರ. ಈ ಹಿಂಸಾಚಾರದ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಪರಿಹಾರಗಳನ್ನು ಕಂಡುಕೊಳ್ಳುವವರೆಗೂ ವಿಶ್ರಮಿಸುವುದಿಲ್ಲ" ಎಂದು ಹೇಳಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆಯ ಫಲವಾಗಿ ಹಲವರನ್ನು ಪ್ರಾಣಾಪಾಯದಿಂದ ರಕ್ಷಿಸಲು ಸಾಧ್ಯವಾಯಿತು. ಒಬ್ಬ ವ್ಯಕ್ತಿ ಮಾತ್ರ ದಾಳಿ ನಡೆಸಿದ್ದು, ಆತನೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆತ ಹೇಗೆ ಮೃತಪಟ್ಟಿದ್ದಾನೆ, ಪೊಲೀಸರ ಗುಂಡೇಟಿಗೆ ಬಲಿಯಾದನೇ ಎಂಬ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಈ ರೀತಿ ದಾಳಿಗಳು ಹೆಚ್ಚುತ್ತಿವೆ. ಕಳೆದ ಶನಿವಾರ ನಗರದ ಎಲ್‌ಜಿಬಿಟಿಕ್ಯು ಕ್ಲಬ್‌ನಲ್ಲಿ ಇದೇ ರೀತಿ ಗುಂಡಿನ ದಾಳಿ ನಡೆದಿದ್ದು, ಐವರು ಸಾವಿಗೀಡಾಗಿದ್ದರು.

Image
Nigeria  Collision between three buses

ನೈಜೀರಿಯ

ಮೂರು ಬಸ್‌ಗಳ ನಡುವೆ ಡಿಕ್ಕಿ

ಈಶಾನ್ಯ ನೈಜೀರಿಯಾದ ಮೈದುಗುರಿ ನಗರದ ಹೊರಗೆ ಮಂಗಳವಾರ ಮೂರು ಬಸ್‌ಗಳು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 37 ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿದ್ದಾರೆ.

ಮೈದುಗುರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಟಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಬಸ್ಸು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಈ ವೇಳೆ ಒಂದು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭದಲ್ಲೇ ಮಾರ್ಗದಲ್ಲಿ ವೇಗವಾಗಿ ಬಂದ ಇನ್ನೊಂದು ಬಸ್ಸು ಈ ಎರಡು ಬಸ್ಸುಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಬಸ್ಸಿಗೆ ವ್ಯಾಪಿಸಿ ಸುಮಾರು ಮೂವತ್ತೇಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಬೊರ್ನೊ ರಾಜ್ಯದ ರಸ್ತೆ ಸುರಕ್ಷತಾ ಏಜೆನ್ಸಿಯ ಮುಖ್ಯಸ್ಥ ಉಟೆನ್ ಬೋಯಿ ಹೇಳಿದ್ದಾರೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅವಘಡಲ್ಲಿ ಮೃತಪಟ್ಟ ಮೃತರ ಗುರುತು ಪತ್ತೆ ಕೆಲಸ ಇನ್ನಷ್ಟೇ ನಡೆಯಬೇಕಿದೆ. ಈವರೆಗೆ, 37 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ” ಎಂದು ಬೋಯಿ ಹೇಳಿದರು

Image
 Turkey  Syria launched a missile

ಟರ್ಕಿ

ಕ್ಷಿಪಣಿ ಪ್ರಯೋಗಿಸಿದ ಸಿರಿಯಾ

ಟರ್ಕಿಯ ಗಡಿಭಾಗದ ನಗರ ಕರ್ಕಾಮಿಸ್‌ಗೆ ಸೋಮವಾರ ಸಿರಿಯಾದಿಂದ ಪ್ರಯೋಗಿಸಿದ ಕ್ಷಿಪಣಿಗಳು ಅಪ್ಪಳಿಸಿದ್ದು, ಮಗುವಿನ ಸಹಿತ ಮೂವರು ಸಾವನ್ನಪ್ಪಿದ್ದು 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈ ಕೃತ್ಯಕ್ಕೆ ಪ್ರತೀಕಾರ ತೀರಿಸಲಿದ್ದೇವೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ. 

ಸಿರಿಯಾದ ಜರಬ್ಲಸ್ ನಗರವನ್ನು ಕರ್ಕಾಮಿಸ್‌ಗೆ  ಸಂಪರ್ಕಿಸುವ ಗಡಿದಾಟುವಿನ ಸಮೀಪದ ಹೈಸ್ಕೂಲ್ ಹಾಗೂ ಅದರ ಬಳಿಯಿದ್ದ 2 ಮನೆಗಳಿಗೆ ಕ್ಷಿಪಣಿ ಅಪ್ಪಳಿಸಿದೆ. ಟ್ರಕ್ ಒಂದು ಬೆಂಕಿಯಲ್ಲಿ ಸುಟ್ಟುಹೋಗಿದೆ ಎಂದು ಆಗ್ನೇಯ ಪ್ರಾಂತದ  ಗವರ್ನರ್ ದವೂತ್ ಗುಲ್ ಹೇಳಿದ್ದಾರೆ.

ಟರ್ಕಿಯ ಉತ್ತರ ಸಿರಿಯಾ ಹಾಗೂ ಇರಾಕ್‌ನಲ್ಲಿರುವ ನಿಷೇಧಿತ ಕುರ್ದಿಷ್ ಉಗ್ರರ ನೆಲೆಯನ್ನು ಗುರಿಯಾಗಿಸಿ ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಸಿರಿಯಾ ದಾಳಿ ನಡೆಸಿದೆ.

Image
 Israel  Shooting in the occupied West Bank

ಇಸ್ರೇಲ್‌ 

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಗುಂಡಿನ ದಾಳಿ 

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸೋಮವಾರ ಇಸ್ರೇಲ್ ಸೇನೆ ನಡೆಸಿದ ಬಂಧನ ಕಾರ್ಯಾಚರಣೆ ಸಂದರ್ಭ ಹಾರಿಸಿದ ಗುಂಡೇಟಿನಿಂದ ಪ್ಯಾಲೆಸ್ತೀನ್ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಜೆನಿನ್‍ನಲ್ಲಿ ಸೇನೆಯು ಬಂದೂಕು ಹೊಂಚುದಾಳಿಯ ಶಂಕಿತ ವ್ಯಕ್ತಿಯನ್ನು ಬಂಧಿಸಿದಾಗ ಪ್ಯಾಲೆಸ್ತೀನಿಯರು ಸೇನೆಯತ್ತ ಗುಂಡಿನ ದಾಳಿಯ ಜತೆಗೆ ಸ್ಫೋಟಕ ಎಸೆದರು. ಪ್ರತಿಯಾಗಿ ಸೇನೆ ಹಾರಿಸಿದ ಗುಂಡು ಕನಿಷ್ಟ ಒಬ್ಬ  ವ್ಯಕ್ತಿಗೆ ತಗುಲಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಶಂಕಿತ ವ್ಯಕ್ತಿಯನ್ನು ಬಂಧಿಸುವ ಮುನ್ನ ಇಸ್ರೇಲ್ ಸೇನೆ ಮನೆಯನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದರಿಂದ ಆತ ಶರಣಾಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಗುಂಡೇಟಿನಿಂದ ಮೃತಪಟ್ಟಾತ ಹೈಸ್ಕೂಲ್ ವಿದ್ಯಾರ್ಥಿ ಎಂದು ಸೇನೆಯ ವೈದ್ಯಕೀಯ ಘಟಕ ದೃಢಪಡಿಸಿದೆ. ವಿದ್ಯಾರ್ಥಿ ಆ ದಾರಿಯಾಗಿ ಶಾಲೆಗೆ ಹೋಗುತ್ತಿದ್ದ ಎಂದು ಪ್ಯಾಲೆಸ್ತೀನ್‍ನ ಶಿಕ್ಷಣ ಇಲಾಖೆ ಹೇಳಿದೆ. ಗಡಿದಾಟು ಬಳಿ ಕರ್ತವ್ಯದಲ್ಲಿದ್ದ 6 ಪೊಲೀಸರು ಹಾಗೂ ಇಬ್ಬರು ಯೋಧರು ಗಾಯಗೊಂಡಿದ್ದರು ಎಂದು ವರದಿಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180