
- ಈ ಪ್ರಪಂಚ ಎಂಬುವುದು ವಿಸ್ಮಯಗಳ ಪಾತ್ರೆ
- ಅತ್ಯಂತ ಹಳೆಯದು ಮತ್ತು ದೊಡ್ಡ ಪಿರಮಿಡ್
ಪ್ರಪಂಚದ ಏಳು ಅದ್ಭುತಗಳು ಒಂದಾಗಿರುವ ಗೀಜಾದ ಪಿರಮಿಡ್ ಈಜಿಪ್ಟ್ ಇತಿಹಾಸದ ಸಂಕೇತ. ಗೀಜಾದ ಮಹಾ ಪಿರಮಿಡ್ (ಇದು ಖುಫುದ ಪಿರಮಿಡ್ ಮತ್ತು ಚಿಯೋಪ್ಸ್ನ ಪಿರಮಿಡ್ ಎಂಬುದಾಗಿಯೂ ಕರೆಯಲ್ಪಡುತ್ತದೆ) ಪ್ರಸ್ತುತದಲ್ಲಿ ಈಜಿಪ್ತ್ನ ಇಐ ಗೀಜಾ ಆಗಿರುವ ಗೀಜಾ ಮೆಕ್ರೊಪೊಲಿಸ್ ಗಡಿಯಲ್ಲಿರುವ ಮೂರು ಪಿರಮಿಡ್ಗಳಲ್ಲಿ ಅತ್ಯಂತ ಹಳೆಯದು ಮತ್ತು ದೊಡ್ಡದಾಗಿರುವ ಪಿರಮಿಡ್. ಈಜಿಪ್ಟ್ನ ನಾಲ್ಕನೇ ರಾಜಮನೆತನದ ಫಾರೂಕ್ ಖುಫು ಸ್ಮಾರಕವಾಗಿ ಇದನ್ನು ನಿರ್ಮಿಸಲ್ಪಟ್ಟಿದೆ.
ಕ್ರಿ.ಪೂ. 2560 ಸುಮಾರು 20 ವರ್ಷಗಳ ಕಾಲ ಪಿರಮಿಡ್ ನಿರ್ಮಿಸಲು ಕಾಲಾವಕಾಶ ತೆಗೆದುಕೊಳ್ಳಲಾಗಿದೆ ಎಂದು ಈಜಿಪ್ಟ್ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. 1465 ಮೀಟರ್ ಎತ್ತರ ಇರುವ ಮಹಾ ಪಿರಮಿಡ್ 3,800 ವರ್ಷಗಳವರೆಗೂ ಜಗತ್ತಿನಲ್ಲಿ ಅತ್ಯಂತ ಎತ್ತರವಾದ ಮಾನವ ನಿರ್ಮಿತ ಕಟ್ಟಡ ವಿನ್ಯಾಸವಾಗಿದೆ.
ಈ ಮಹಾ ಪಿರಮಿಡ್ನಲ್ಲಿ ಮೂರು ಕೋಣೆಗಳಿದ್ದು, ಮೇಲಿನ ಭಾಗವು ಈಗಲೂ ಸಂಪೂರ್ಣವಾಗದೇ ಉಳಿದುಕೊಂಡಿದೆ. ಗೀಜಾದ ಮಹಾ ಪಿರಮಿಡ್ ಈಜಿಪ್ಟ್ನಲ್ಲಿ ಏರಿಕೆ ಕ್ರಮ ಮತ್ತು ಇಳಿಕೆ ಕ್ರಮದ ಎರಡೂ ರೀತಿಯ ವಿಭಾಗಗಳನ್ನು ಹೊಂದಿರುವ ಏಕೈಕ ಪಿರಮಿಡ್. ಕೆಲವು ಈಜಿಪ್ಟ್ ಇತಿಹಾಸಕರ ಪ್ರಕಾರ ಈ ಪಿರಮಿಡ್ ಪೂರ್ವನಿಯೋಜಿತವಾಗಿ ಕಲ್ಪಿಸಿಕೊಂಡು ಮಾಡಿದ ಕಾರ್ಯ ಎಂದು ಬರೆದಿದ್ದಾರೆ.

ಕಟ್ಟಡವು ಸುಮಾರು 2.3 ಕೋಟಿ ಸುಣ್ಣದ ಕಲ್ಲುಗಳನ್ನು ಹೊಂದಿದೆ. ಬಹುತೇಕವಾಗಿ ಎಲ್ಲ ಕಲ್ಲುಗಳನ್ನು ಹತ್ತಿರದ ಕಲ್ಲುಗಣಿಗಳಿಂದ ತರಲಾಗಿವೆ.
ಹೊರಮೈಯಲ್ಲಿ ಬಳಸಲಾದ ತುರಾ ಸುಣ್ಣದ ಕಲ್ಲನ್ನು ಹತ್ತಿರದಲ್ಲಿರುವ ನದಿಯ ಉದ್ದಗಲಕ್ಕೂ ಸಂಗ್ರಹಿಸಲಾಗಿದೆ. ದೊಡ್ಡ ಗ್ರ್ಯಾನೆಟ್ ಕಲ್ಲುಗಳು ರಾಜನ ಕೊಣೆಯ ಹತ್ತಿರದಲ್ಲಿ ಕಂಡುಬರುತ್ತವೆ. ಇವುಗಳು ಸುಮಾರು 25ರಿಂದ 80 ಟನ್ಗಳಷ್ಟು ತೂಕವಿದ್ದು, ಅವುಗಳನ್ನು 500 ಮೈಲುಗಳಿಗಿಂತಲೂ ದೂರದ ಆಸ್ವಾನ್ದಿಂದ ತರಲಾಗಿದೆ. ಪ್ರಾಚೀನ ಈಜಿಪ್ಟ್ನ್ನರು ಕಲ್ಲುಗಳಿಗೆ ಮರದಿಂದ ತಯಾರಿಸಿದ ಸುತ್ತಿಗೆ ಮತ್ತು ಬೆಣೆಗಳ ಮೂಲಕ ಹೊಡೆದು ನೀರಿನಲ್ಲಿ ನೆನೆಸುತ್ತಿದ್ದರು ಎಂಬ ಉಲ್ಲೇಖವಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವವಿಸ್ಮಯ | ಅಪರೂಪದ ಹಲ್ಲಿ ಜಾತಿಗೆ ಹೆಸರಾಗಿರುವ ಇಂಡೋನೇಷ್ಯಾದ ಕೊಮೊಡೊ ನ್ಯಾಷನಲ್ ಪಾರ್ಕ್
ಕಲ್ಲು ನೀರಿನಲ್ಲಿ ಚೆನ್ನಾಗಿ ನೆನೆದ ಬಳಿಕ ಮತ್ತು ಜೋರಾಗಿ ಹೊಡೆದು ಕಲ್ಲುಗಳ ಬಿರುಕನ್ನು ಇನ್ನಷ್ಟು ಕೊರೆಯುತ್ತಿದ್ದರು. ಒಮ್ಮೆ ಆ ಕಲ್ಲುಗಳನ್ನು ಕತ್ತರಿಸಿದ ಬಳಿಕ ಅವುಗಳನ್ನು ನೈಲ್ ನದಿಯಲ್ಲಿ ಹಡಗುಗಳ ಮೂಲಕ ಮೇಲ್ಮುಖ ಅಥವಾ ಕೆಳಮುಖವಾಗಿ ಸಾಗಿಸಲಾಗುತ್ತಿತ್ತು. ಸುಮಾರು 5.5 ಮಿಲಿಯನ್ ಟನ್ ಸುಣ್ಣದ ಕಲ್ಲುಗಳು, 8,೦೦೦ ಟನ್ ಗ್ರೇನೆಟ್ ಕಲ್ಲುಗಳು (ಆಸ್ವಾನ್ದಿಂದ ಆಮದು ಮಾಡಿಕೊಂಡಿದ್ದಾರೆ) ಹಾಗೂ 5೦೦,೦೦೦ ಟನ್ಗಳಷ್ಟು ಗಾರೆಯನ್ನು ಈ ಬೃಹತ್ ಪಿರಮಿಡ್ ನಿರ್ಮಾಣಕ್ಕೆ ಬಳಸಲಾಗಿದೆ.
ಜಾನ್ ರೋಮರ್ ಹೇಳುವಂತೆ ಆತನ ಪುಸ್ತಕವಾದ 'ದಿ ಗ್ರೇಟ್ ಪಿರಮಿಡ್ ಏನ್ಸಿಯೆಂಟ್ ಈಜಿಪ್ಟ್ ರಿವಿಸಿಟೆಡ್'ನಲ್ಲಿ ಹೇಳಿದ ಪ್ರಕಾರ, "ಈ ಎಲ್ಲ ಪುರಾತನ ರಚನೆಗಳ ನಿಜವಾದ ಉದ್ದೇಶವನ್ನು ಯಾವ ಆಧುನಿಕ ಹಣೆಪಟ್ಟಿಗಳಿಂದಲೂ ವಿವರಿಸಲು ಸಾಧ್ಯವಿಲ್ಲ. ಅವುಗಳ ಮೂಲ ಉದ್ದೇಶ ತಿಳಿದುಕೊಳ್ಳುವುದು ಸುಲಭ ಸಾಧ್ಯವಲ್ಲ. ಹೀಗೆಯೇ ಈ ಪ್ರಪಂಚ ಎಂಬುವುದು ವಿಸ್ಮಯಗಳ ಪಾತ್ರೆ. ನಮಗೆ ಅಗತ್ಯವಿರುವಷ್ಟು ತಿಳಿದುಕೊಂಡು ಮಿಕ್ಕಿದನ್ನು ಬಿಟ್ಟುಬಿಡಬೇಕು."