ಜುಲೈನಲ್ಲಿ ಇಸ್ರೋ ಚಂದ್ರಯಾನ-3: ಉಡಾವಣೆಗೆ ಸಜ್ಜಾದ ಬಾಹ್ಯಾಕಾಶ ನೌಕೆ

Date:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ ಮಧ್ಯದಲ್ಲಿ ಉಡಾವಣೆ ಮಾಡಲು ನಿರ್ಧರಿಸಿದೆ. ಬಹುಶಃ ಜುಲೈ 12 ರಂದು ಚಂದ್ರಯಾನ-3ರ ರಾಕೆಟ್ ಉಡ್ಡಯನವಾಗುವ ನಿರೀಕ್ಷೆಯಿದೆ. ಬಾಹ್ಯಾಕಾಶ ನೌಕೆಯು ಆರ್ಬಿಟರ್, ಸಾಫ್ಟ್ ಲ್ಯಾಂಡರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ಅನ್ನು ಹೊತ್ತೊಯ್ಯಲಿದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನ-2 ಮಿಷನ್ ಸಮಯದಲ್ಲಿ ಸಾಫ್ಟ್ ಲ್ಯಾಂಡರ್ ವಿಫಲವಾಗಿತ್ತು. ಅದು ಸಾಫ್ಟ್‌ವೇರ್ ದೋಷಕ್ಕೆ ಕಾರಣವಾಗಿತ್ತು. ಇದೀಗ, ಚಂದ್ರಯಾನ-3 ಸಾಫ್ಟ್ ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್‌ನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮತ್ತೊಂದು ಪ್ರಯತ್ನವಾಗಿದೆ.

“ಮಿಷನ್‌ಅನ್ನು ಜುಲೈ 12ರಂದು ಉಡಾಯಿಸುವ ಗುರಿಯನ್ನು ಹೊಂದಿದ್ದೇವೆ. ಬಾಹ್ಯಾಕಾಶ ನೌಕೆಯು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ನೌಕೆಯು ಜುಲೈ 13ರಂದು ಉಡಾವಣೆಗೊಳ್ಳುವ ರಷ್ಯಾದ ಲೂನಾ-25ರೊಂದಿಗೆ ಸ್ಪರ್ಧಿಸಲಿದೆ” ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಚಂದ್ರಯಾನ-3 ಉಡಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್ ಅಂತ್ಯದಲ್ಲಿ ಎಲ್ಲ ಅಗತ್ಯ ಪರೀಕ್ಷೆಗಳನ್ನು ಪೂರ್ಣಗೊಂಡಿವೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯ ಮಾದರಿಗಳನ್ನು ಸಂಗ್ರಹಿಸಲು ಸಜ್ಜುಗೊಂಡಿದೆ. ಚಂದ್ರನಲ್ಲಿನ ಭೂಕಂಪನ ಚಟುವಟಿಕೆ, ಪರಿಸರ ಮತ್ತು ಧಾತುರೂಪ ಕುರಿತ ಮಾಹಿತಿಗಳನ್ನು ಸಂಗ್ರಹಿಸುತ್ತದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೇ 21ಕ್ಕೆ ‘ವಿಶ್ವ ದಿನದ ಅಂತ್ಯ’ | ಇಲ್ಲಿದೆ ಆಚರಣೆಯ ಹಿಂದಿರುವ ಅಸಲೀ ಕಾರಣ

“ಕುತೂಹಲಕಾರಿಯಾಗಿ, ಮೂರನೇ ಮಿಷನ್ ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿರುತ್ತದೆ. ಪ್ರೊಪಲ್ಷನ್ ಮಾಡ್ಯೂಲ್ ಸಂವಹನ ಉಪಗ್ರಹವಾಗಿಯೂ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ. ಚಂದ್ರಯಾನ-2 ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿತ್ತು.

“ಚಂದ್ರಯಾನ-3 ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಇಸ್ರೋದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ನಿರ್ದಿಷ್ಟವಾಗಿ ಪ್ರಸ್ತಾವಿತ ಚಂದ್ರನ ಧ್ರುವ ಪರಿಶೋಧನೆ ಮಿಷನ್‌ನಲ್ಲಿ ಜಪಾನ್‌ನ ಸಹಯೋಗ ನೀಡಿದೆ. ಉಭಯ ದೇಶಗಳು ಚಂದ್ರನ ವಸ್ತುಗಳ ಸಂಗ್ರಹ, ಮಾದರಿ ಮತ್ತು ವಿಶ್ಲೇಷಣೆಯಲ್ಲಿ ಕೆಲಸ ಮಾಡಲಿವೆ. ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಶನ್ ಮಿಷನ್ ಅಥವಾ ಚಂದ್ರಯಾನ-4, 2025ರ ವೇಳೆಗೆ ಉಡಾವಣೆಯಾಗುವ ನಿರೀಕ್ಷೆಯಿದೆ. ಅಲ್ಲಿ ಲ್ಯಾಂಡರ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಪ್ರಯತ್ನಿಸುತ್ತವೆ” ಎಂದು ಇಸ್ರೋ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ಎಲ್ಲರೂ ಮತದಾನ ಹಾಕಿ : ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ

ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಹಕ್ಕು...

ದಾವಣಗೆರೆ | ಭ್ರಷ್ಟಾಚಾರ, ಜನವಿರೋಧಿ ನೀತಿಗೆ ಬೇಸತ್ತಿರುವ ಜನತೆ ಬಿಜೆಪಿಗೆ ಬೆಂಬಲಿಸುತ್ತಾರೆ: ಮೋದಿ ವಿಶ್ವಾಸ

ಕಾಂಗ್ರೆಸ್ ಪಾಪದ ಕೆಲಸಕ್ಕೆ ಕರ್ನಾಟಕದ ಜನತೆ ಲೋಕಸಭೆ ಚುನಾವಣೆಯಲ್ಲಿ ಸೂಕ್ತ ಉತ್ತರ...

ಬೆಂಗಳೂರು | ಕಳೆದ 8 ವರ್ಷಗಳಲ್ಲಿ 2ನೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ದಿನ

ಬೆಂಗಳೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ ಅಂದರೆ, ಬರೋಬ್ಬರಿ 38 ಡಿಗ್ರಿ ಸೆಲ್ಸಿಯಸ್...

ಕಲಬುರಗಿ | ದೇಶದ ಅಡಿಪಾಯವನ್ನು ಶಾಶ್ವತವಾಗಿ ಬದಲಾಯಿಸಲಿದೆ ಈ ಬಾರಿಯ ಚುನಾವಣೆ: ದಸಂಸ

ಈ ದೇಶದ ಅಡಿಪಾಯವನ್ನು ಶಾಶ್ವತವಾಗಿ ಬದಲಾಯಿಸಲಿರುವ ಈ ಬಾರಿಯ ಚುನಾವಣೆಯಲ್ಲಿ ಕಲಬುರ್ಗಿ...